ಉಡುಪಿ ಬ್ರಹ್ಮಾವರ ; ಭದ್ರಗಿರಿ ಶ್ರೀ ವೀರವಿಠ್ಠಲ ದೇವಸ್ಥಾನದಲ್ಲಿ ಕೀರ್ತನಾಗ್ರೇಸರ ಸಂತ ಭದ್ರಗಿರಿ ಅಚ್ಯುತದಾಸರ 12 ನೇ ಪುಣ್ಯತಿಥಿ ಸಂಸ್ಮರಣೆಯ ಪ್ರಯುಕ್ತ ಆದಿತ್ಯವಾರ ತಾ.26.10.2025 ರಂದು ಪ್ರಭಾಕರ ಭಟ್, ಉಡುಪಿ ಇವರಿಂದ ಗಂಗಾವತರಣ - ಭಗೀರಥ ಆಖ್ಯಾನ ಎಂಬ ಹರಿಕಥಾ ಕಾಲಕ್ಷೇಪ ಸೇವೆ ನಡೆಯಿತು. ಹಾರ್ಮೋನಿಯಂನಲ್ಲಿ ಶಂಕರ ಶೆಣೈ ಮತ್ತು ತಬಲಾದಲ್ಲಿ ಗುರುದತ್ತ ನಾಯಕ್ ಸಹಕರಿಸಿದರು. ಶ್ರೀ ದೇವಸ್ಥಾನದ ಆಡಳಿತ ಮೊಕ್ತೇಸರ ಭದ್ರಗಿರಿ ಪಾಂಡುರಂಗ ಆಚಾರ್ಯ ಮತ್ತು ಆಡಳಿತ ಮಂಡಳಿಯ ಸದಸ್ಯರು, ಶ್ರೀ ವೀರವಿಠ್ಠಲ ಭಜನಾ ಮಂಡಳಿಯ ಸದಸ್ಯರು ಮತ್ತು ನೂರಾರು ಭಕ್ತಾದಿಗಳು ಭಾಗವಹಿಸಿದ್ದರು ಗಣೇಶ ಜಿ ಪೈ ,ಪರ್ಕಳ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಹರಿಕಥಾ ಕಾಲಕ್ಷೇಪದ ಸೇವಾದಾರರಾದ ಸಂತ ಭದ್ರಗಿರಿ ಅಚ್ಯುತದಾಸರ ಮಕ್ಕಳಿಂದ ಅನ್ನಸಂತರ್ಪಣೆ ಸೇವೆ ನಡೆಯಿತು.

0 ಕಾಮೆಂಟ್‌ಗಳು