Header Ads Widget

ಉಡುಪಿ : ಭರತ ಮುನಿ ಜಯಂತಿಯೋತ್ಸವ

ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀ ಕೃಷ್ಣ ಮಠ ಉಡುಪಿ ಆಶ್ರಯದಲ್ಲಿ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀ ಪಾದಂಗಳವರ ಹಾಗೂ ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀ ಪಾದಂಗಳವರ ಆಶೀರ್ವಾದಗಳೊಂದಿಗೆ ರಾಧಾಕೃಷ್ಣ ನೃತ್ಯ ನಿಕೇತನ (ರಿ.) ಉಡುಪಿ ತನ್ನ 23ನೇ ವರುಷದ ಭರತಮುನಿ ಜಯಂತ್ಯುತ್ಸವವನ್ನುಅಕ್ಟೋಬರ್‌ 26ನೇ ತಾರೀಖು ಆದಿತ್ಯವಾರ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ ಎಂದು ನೃತ್ಯ ಗುರು ವಿದುಷಿ ವಿದುಷಿ ವೀಣಾ ಮುರಳೀಧರ ಸಾಮಗ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. 

ಭರತಮುನಿ ಜಯಂತ್ಯುತ್ಸವದಲ್ಲಿ ಶ್ರೀ ಕೃಷ್ಣ ಮಠದ ಎದುರಿನಿಂದ ನಾಟ್ಯ ಶಾಸ್ತ್ರ ಗ್ರಂಥ, ನಟರಾಜ ಹಾಗೂ ಗಣ್ಯರನ್ನು ಒಳಗೊಂಡು ಕುಂಭ ಕಲಶದೊಂದಿಗೆ ರಾಜಾಂಗಣಕ್ಕೆ ಆಗಮಿಸಿ ಪರ್ಯಾಯ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀ ಪಾದಂಗಳವರು ಶ್ರೀ ಪುತ್ತಿಗೆ ಮಠ ಇವರಿಂದ ಕಾರ್ಯಕ್ರಮ ಉದ್ಘಾಟನೆ ಮತ್ತು ಆಶೀರ್ವಚನ, ಪುತ್ತಿಗೆ ಮಠದ ಕಿರಿಯ ಪೀಠಾಧಿಪತಿ ಶ್ರೀ ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀ ಪಾದಂಗಳವರು ದಿವ್ಯ ಉಪಸ್ಥಿತಿ ಹಾಗೂ ಆಶೀರ್ವಚನ ನೀಡಲಿರುವರು.

ಕಾರ್ಯಕ್ರಮದ ಅಧ್ಯಕ್ಷರಾಗಿ ಶ್ರೀ ವೇದಮೂರ್ತಿ ಕೆ. ಪದ್ಮನಾಭ ಭಟ್‌, ಕಿದಿಯೂರು ಇವರು ಆಗಮಿಸಲಿರುವರು.

ಅತಿಥಿಗಳಾಗಿ ವಿದುಷಿ ರೋಹಿಣಿ ಉದಯ್‌, ಶ್ರೀ ದೇವಿ ನೃತ್ಯಾರಾಧನ ಕಲಾಕೇಂದ್ರ, ಪುತ್ತೂರು ಆಗಮಿಸಲಿರುವರು.

ಪ್ರತೀ ವರುಷದಂತೆ ನೃತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆಗೈದ ಕಲಾವಿದರಿಗೆ ಭರತ ಪ್ರಶಸ್ತಿ ನೀಡಲಾಗುವುದು. 


ಈ ವರ್ಷ ಭರತ ಪ್ರಶಸ್ತಿಯನ್ನು ಸ್ವೀಕರಿಸಲಿರುವವರು:

o ಗುರು ವಿದ್ವಾನ್‌ ಬಾಲಕೃಷ್ಣ ಬಿ., “ನಾಟ್ಯನಿಲಯಂ” ಮಂಜೇಶ್ವರ ಕಾಸರಗೋಡು.

o ಕರ್ನಾಟಕ ಕಲಾಶ್ರೀ ಡಾ. ಎಸ್‌ ಕೇಶವ್‌ ಕುಮಾರ್‌ ಪಿಳ್ಳೈ, ನಿರ್ದೇಶಕರು, ನಟನಂ ಬಾಲ ನಾಟ್ಯ ಕೇಂದ್ರ (ರಿ.), ಶಿವಮೊಗ್ಗ.


• ಕಲಾರ್ಪಣ ಪ್ರಶಸ್ತಿಯನ್ನು ಸ್ವೀಕರಿಸವವರು:

o ರೆಮೊನಾ ಇವೆಟೆ ಪೆರೆರಾ, ಮಂಗಳೂರು; 170 ಘಂಟೆಗಳ ಕಾಲ ನಿರಂತರ ನೃತ್ಯ ಕಾರ್ಯಕ್ರಮ ನೀಡಿ ವರ್ಲ್ಡ್‌ ರೆಕಾರ್ಡ್‌ ಮಾಡಿದ ನೃತ್ಯ ಕಲಾವಿದೆ.

o ವಿದುಷಿ ದೀಕ್ಷಾ, 216 ಘಂಟೆಗಳ ಕಾಲ ನಿರಂತರ ನೃತ್ಯ ಕಾರ್ಯಕ್ರಮ ನೀಡಿ ವರ್ಲ್ಡ್‌ ರೆಕಾರ್ಡ್‌ ಮಾಡಿದ ನೃತ್ಯ ಕಲಾವಿದೆ.

• ಗುರು ರಾಧಾಕೃಷ್ಣಾನುಗ್ರಹ ಪ್ರಶಸ್ತಿ : ನಮ್ಮ ಸಂಸ್ಥೆಯಲ್ಲಿ ವಿದ್ವತ್‌ ಪದವಿ ಪಡೆದ ನಮ್ಮ ಶಿಷ್ಯರಿಗೆ ಸಂಸ್ಥೆಯ ಸಂಸ್ಥಾಪಕರಾದ ಗುರು ಕೀರ್ತಿಶೇಷ ರಾಧಾಕೃಷ್ಣ ತಂತ್ರಿಯವರ ಹೆಸರಿನಲ್ಲಿ ಗುರುಗಳ ಆಶೀರ್ವಾದ ಪೂರಕವಾಗಿ ನೀಡುವ ಪ್ರಶಸ್ತಿ ಗುರು ರಾಧಾಕೃಷ್ಣಾನುಗ್ರಹ ಪ್ರಶಸ್ತಿ.

ಈ ಬಾರಿ ಪ್ರಶಸ್ತಿ ಸ್ವೀಕರಿಸುವವರು:


o ವಿದುಷಿ ಶ್ರಾವ್ಯ

o ವಿದುಷಿ ಸಿಂಚನಾ

o ವಿದುಷಿ ಮೇಘನಾ

o ವಿದುಷಿ ಸಹನಾ ದೀಪ್ತಿ

o ವಿದುಷಿ ಮೇಧಾ ತಂತ್ರಿ

ಸಭಾ ಕಾರ್ಯಕ್ರಮದ ನಂತರ “ಶಿಷ್ಯ ಪ್ರಶಿಷ್ಯ” ನೃತ್ಯ ಕಾರ್ಯಕ್ರಮ, ಅಂದರೆ ಹಲವಾರು ಶಿಷ್ಯರು ನಮ್ಮ ಸಂಸ್ಥೆಯಲ್ಲಿ ವಿದ್ವತ್‌ ಪದವಿ ಮುಗಿಸಿ ತೇರ್ಗಡೆ ಹೊಂದಿ ತಮ್ಮದೇ ಆದ ನೃತ್ಯ ಸಂಸ್ಥೆ ಹೊಂದಿದ್ದಾರೆ. ಅವರಿಗೆ ಮತ್ತು ಅವರ ಶಿಷ್ಯರಿಗೆ ಭರತಮುನಿ ಜಯಂತ್ಯುತ್ಸವದಲ್ಲಿ ನೃತ್ಯ ಕಾರ್ಯಕ್ರಮ ನೀಡಲು ಅವಕಾಶ ಕಲ್ಪಿಸಿ; ಗುರು ಶಿಷ್ಯ ಪರಂಪರೆಯನ್ನು ಬೆಳೆಸುವಲ್ಲಿ ಉಳಿಸುವಲ್ಲಿ ನಮ್ಮ ಸಂಸ್ಥೆ ಹಮ್ಮಿಕೊಂಡ ವಿಶೇಷ ಕಾರ್ಯಕ್ರಮ.

o ವಿದುಷಿ ಶ್ರೀಮತಿ ಸುಷ್ಮಿತಾ ಗಿರಿರಾಜ್‌, ಆಂಗಿಕಂ ನೃತ್ಯ ನಿಕೇತನಂ, ಉದ್ಯಾವರ.

o ವಿದುಷಿ ಶ್ರೀವಿದ್ಯಾ ಸಂದೇಶ್‌, ಸಾವಿತ್ರಿ ನಾಟ್ಯ ಶಾಲಾ, ಉಡುಪಿ.

o ವಿದುಷಿ ಶ್ರೀ ಕಲ್ಯಾಣಿ ಜೆ. ಪೂಜಾರಿ, ವಿವರ್ತ ಆರ್ಟ್‌ ಸ್ಪೇಸ್‌, ಉಡುಪಿ ನೃತ್ಯ ಕಾರ್ಯಕ್ರಮ ನೀಡಲಿರುವವರು.

ಮಧ್ಯಾಹ್ನ 3.00ಕ್ಕೆ “ನೃತ್ಯ ಸಿಂಚನ” ಭರತನಾಟ್ಯ ಕಾರ್ಯಕ್ರಮ ರಾಧಾಕೃಷ್ಣ ನೃತ್ಯ ನಿಕೇತನದ ವಿದ್ಯಾರ್ಥಿಗಳಿಂದ.

ರಾತ್ರಿ 7.00ಕ್ಕೆ “ನೃತ್ಯಾಭಿಷೇಕಂ” ರಾಧಾಕೃಷ್ಣ ನೃತ್ಯ ನಿಕೇತನದ ಶಿಷ್ಯರಿಂದ ಕೂಚುಪುಡಿ ನೃತ್ಯ ಕಾರ್ಯಕ್ರಮ.

ಈ ಸಂದರ್ಭದಲ್ಲಿ ಬಿ.ಎಂ ಪೃಥ್ವೀರಾಜ್‌ ಸಾಮಗ, ವಿಶ್ವರೂಪ ಮಧ್ಯಸ್ಥ, ಅದಿತಿ ನಾಯಕ್‌, ಶ್ರೀಮತಿ ರಾಧಿಕಾ , ಸ್ವಾತಿ ಉಪಾಧ್ಯಾಯ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು