ಉಡುಪಿಗೆ ಬನ್ನಿ ತಂಡದ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ಹೇರೂರಿನಲ್ಲಿ ಅ.25 ಶನಿವಾರ ಸಂಜೆ ಹಕ್ಕಿ ವೀಕ್ಷಣೆ ಕಾರ್ಯಕ್ರಮ ನಡೆಯಿತು. ಸುಮಾರು ಒಂದು ಗಂಟೆಗಳ ಕಾಲ ಸುತ್ತಮುತ್ತಲಿನ ಪರಿಸರದಲ್ಲಿ ಕಾಲ್ನಡಿಗೆಯ ಮೂಲಕ ತೆರಳಿ ಪರಿಸರ ಆಸಕ್ತರು 32 ಪ್ರಬೇಧಗಳ 65 ಹಕ್ಕಿಗಳನ್ನು ಪಟ್ಟಿ ಮಾಡಿದರು. ಏಷಿಯನ್ ಪಾಮ್ ಸ್ವಿಫ್ಟ್, ರೆಡ್ ವ್ಯಾಟ್ಲಡ್ ಲ್ಯಾಪ್ವಿಂಗ್, ಏಷಿಯನ್ ಓಪನ್ ಬಿಲ್, ಪ್ಲಮ್ ಹೆಡೆಡ್ ಪ್ಯಾರಾಕೀಟ್, ವರ್ನಲ್ ಹ್ಯಾಂಗಿಂಗ್ ಪ್ಯಾರಟ್, ಬ್ಲಾಕ್ ಹೂಡೆಡ್ ಓರಿಯೋಲ್, ಇಂಡಿಯನ್ ಪ್ಯಾರಾಡೈಸ್ ಫ್ಲೈ ಕ್ಯಾಚರ್, ಗೋಲ್ಡನ್ ಫ್ರಾಂಟೆಡ್ ಲೀಫ್ ಬರ್ಡ್ ಸೇರಿದಂತೆ 32 ಪ್ರಬೇಧಗಳ ಹಕ್ಕಿಗಳನ್ನು ವೀಕ್ಷಿಸಲಾಯಿತು.
ಕಾರ್ಯಕ್ರಮದ ಕುರಿತು ಮಾತನಾಡಿದ ಉಡುಪಿಗೆ ಬನ್ನಿ ತಂಡದ ಸದಸ್ಯ ಡಾ. ಗಣೇಶ್ ಪ್ರಸಾದ್ ಜಿ. ನಾಯಕ್, ಹಕ್ಕಿ ವೀಕ್ಷಣೆಯಿಂದ ಮಾನಸಿಕ ನೆಮ್ಮದಿಯ ಜತೆಗೆ ನಮ್ಮಲ್ಲಿ ನಿಸರ್ಗದ ಜತೆ ಉತ್ತಮ ಬಾಂಧವ್ಯ ಸ್ಥಾಪಿಸಲು ಸಾಧ್ಯವಾಗುತ್ತದೆ. ಹಕ್ಕಿ ವೀಕ್ಷಣೆ ಹವ್ಯಾಸದಿಂದ ಒತ್ತಡ ನಿರ್ವಹಣೆಯ ಜತೆಗೆ ಅನೇಕ ಕುತೂಹಲಕಾರಿ ಅಂಶಗಳನ್ನು ಅರ್ಥೈಸಿಕೊಳ್ಳಲು ಉತ್ತಮ ಅವಕಾಶ ಸಿಗುತ್ತದೆ. ಹಕ್ಕಿ ವೀಕ್ಷಣೆಯಿಂದ ಸುಸ್ಥಿರ ಪ್ರವಾಸೋದ್ಯಮಕ್ಕೆ ಉತ್ತೇಜನ ಸಾಧ್ಯ ಎಂದರು.
ಕುಂದಾಪುರದ ಸುಮಂತ್ ಅವರು, ಹಕ್ಕಿಗಳ ಸ್ವಭಾವ, ಆಹಾರ ಕ್ರಮ ಹಾಗೂ ಗುಣಲಕ್ಷಣಗಳ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು. ಗಿರೀಶ್ ಆಚಾರ್, ಶ್ರೀಕಾಂತ್ ಪೂಜಾರಿ, ಪ್ರದೀಪ್ ನಾಯಕ್, ಉಲ್ಲಾಸ್ ಶೆಣೈ, ಪ್ರತಿಮಾ ಆಚಾರ್, ಕೆ. ಉದಯ ಕುಮಾರ್, ಕೆ. ಸ್ವಾತಿ, ಮೇಧಾ ನಾಯಕ್, ಸ್ವಾತಿ, ತನ್ವಿ ಮುಂತಾದವರು ಉಪಸ್ಥಿತರಿದ್ದರು.

0 ಕಾಮೆಂಟ್‌ಗಳು