Header Ads Widget

ಅ.25: ಉಡುಪಿಯಲ್ಲಿ ಹಕ್ಕಿ ವೀಕ್ಷಣೆ

ಹಕ್ಕಿ ವೀಕ್ಷಣೆ ಮನಸ್ಸಿಗೆ ಮುದ ನೀಡುವ ಹವ್ಯಾಸ ಮಾತ್ರವಲ್ಲದೇ, ನಿಸರ್ಗದ ಜತೆ ಬೆರೆತು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಮತ್ತಷ್ಟು ಬಲಪಡಿಸಲು ಇಂಧನ ಒದಗಿಸುತ್ತದೆ. ಈ ನಿಟ್ಟಿನಲ್ಲಿ 'ಉಡುಪಿಗೆ ಬನ್ನಿ' ತಂಡದ ನೇತೃತ್ವದಲ್ಲಿ ಅಕ್ಟೋಬರ್ 25 ಶನಿವಾರ ಸಂಜೆ 4 ಗಂಟೆಯಿಂದ 5 ಗಂಟೆಯವರೆಗೆ ಉಡುಪಿ ಜಿಲ್ಲೆಯ ಬ್ರಹ್ಮಾವರದ ಹೇರೂರು ಬಳಿ ಹಕ್ಕಿ ವೀಕ್ಷಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 


ಯಾರು ಭಾಗವಹಿಸಬಹುದು? 

ಹಕ್ಕಿ ವೀಕ್ಷಣೆಯಲ್ಲಿ ಆಸಕ್ತಿ ಇರುವವರು, ಛಾಯಾಗ್ರಾಹಕರು, ಬ್ಲಾಗ್ ರಚಿಸುವವರು ಹಾಗೂ ಪರಿಸರ ಪ್ರೇಮಿಗಳು ಹಕ್ಕಿ ವೀಕ್ಷಣೆಯಲ್ಲಿ ಭಾಗವಹಿಸಬಹುದು. ಭಾಗವಹಿಸುವಿಕೆ ಸಂಪೂರ್ಣವಾಗಿ ಉಚಿತವಾಗಿದ್ದು, ಭಾಗವಹಿಸುವವರು ಗೂಗಲ್ ಫಾರ್ಮ್ ಲಿಂಕ್ https://forms.gle/tGMC2CaDpBedAKFv9 ಮೂಲಕ ನೊಂದಣಿ ಮಾಡಿಕೊಳ್ಳಲು ಪ್ರಕಟಣೆಯ ಮೂಲಕ ಸಂಘಟಕರು ವಿನಂತಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು