Header Ads Widget

ಮಣಿಪಾಲ : ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ!

ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದ ವ್ಯಕ್ತಿಯೊಬ್ಬರು, ಮಲಗಿದ್ದಲ್ಲಿಯೇ ಮೃತಪಟ್ಟಿದ್ದು, ಶವವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಮಣಿಪಾಲದಲ್ಲಿ ನಡೆದಿದೆ.

ಮಣಿಪಾಲದ ರಾಹುಲನಗರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಇವರು ಮೃತಪಟ್ಟು ನಾಲ್ಕು ದಿನಗಳು ಕಳೆದಿರಬಹುದೆಂದು ಶoಕಿಸಲಾಗಿದೆ.

ಮೃತ ವ್ಯಕ್ತಿಯ ಹೆಸರು ಆರ್. ಸೆಲ್ವರಾಜ್, ಹಣಕಾಸು ವ್ಯವಹಾರ ನಡೆಸುತ್ತಿದ್ದರೆಂದು ತಿಳಿದುಬಂದಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.

ಕಡ್ತಲ ಸದಾನಂದ ಮೂಲ್ಯ ಎನ್ನುವರಿಂದ ಘಟನೆ ವಿಷಯ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಬಂದು, ಮಣಿಪಾಲ ಪೋಲಿಸ್ ಠಾಣೆಯ‌ ಎ ಎಸ್ ಐ ವಿಜಯ್, ಮುಖ್ಯ ಆರಕ್ಷಕರಾದ ಶಶಿಧರ್, ಸುರೇಶ್ ಶೆಟ್ಟಿ ಕಾನೂನು ಪ್ರಕ್ರಿಯೆ ನಡೆಸಿದರು.

ಸಮಾಜಸೇವಕ ನಿತ್ಯಾನಂದ‌ ಒಳಕಾಡುವರು‌, ಕೊಳೆತ ಕಳೇಬರವನ್ನು ಪ್ಲಾಸ್ಟಿಕ್ ಹೊದಿಕೆಯಲ್ಲಿ ಭದ್ರಗೊಳಿಸಿ, ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸುವ ವ್ಯವಸ್ಥೆಗೊಳಿಸಿ, ಠಾಣೆಗೆ ನೆರವಾದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು