Header Ads Widget

ದೀಪಾವಳಿಗೆ ಅಲೆಮಾರಿ ಆಕಾಶಕಾಯಗಳು

ಈಗಿಂದ ಅಕ್ಟೋಬರ್ ಅಂತ್ಯಕ್ಕೆ ದೀರ್ಘವೃತ್ತದಲ್ಲಿ ಸೂರ್ಯನನ್ನು ಸುತ್ತು ಹೊಡೆಯುತ್ತಿರುವ ಮೂರು ಧೂಮಕೇತುಗಳು ಗೋಚರಿಸಿವೆ.  

ಅವು “ಲೆಮೆನ್ “ , “ ಸ್ವಾನ್ “ ಹಾಗೂ “ ಅಟ್ಲಸ್ “ . ಇವುಗಳಲ್ಲಿ ಲೆಮೆನ್ ಧೂಮಕೇತು ಮಾತ್ರ ಬರಿಗಣ್ಣಿಗೆ ಕಾಣಿಸುತ್ತಿದೆ.

ಲೆಮೆನ್ ಅಕ್ಟೋಬರ್ 21ರಂದು ಭೂಮಿಗೆ ಸುಮಾರು 90 ಮಿಲಿಯ ಕೀಮೀ ಸಮೀಪ ಬಂದು ಸಂಜೆಯ ಕೆಲ ಸಮಯ ಪಶ್ಚಿಮೋತ್ತರ ಆಕಾಶದಲ್ಲಿ ಸಪ್ತಋಷಿ ಆಕಾಶಪುಂಜದ ಬಾಲದಲ್ಲಿರುವ ಮರೀಚಿ ನಕ್ಷತ್ರದ ಪಕ್ಕ ಹಾದು ಸ್ವಾತಿ ನಕ್ಷತ್ರದ ಸಮೀಪ ಕಾಣಿಸಲಿದೆ. 

ನವಂಬರ್ 8 ರಂದು ಸೂರ್ಯ ಸಮೀಪ ತಲುಪಿ ಹಿಂತಿರುಗುತ್ತದೆ. ಸುಮಾರು 1350 ವರ್ಷಗಳಿಗೊಮ್ಮೆ ಈ ಲೆಮೆನ್ ಧೂಮಕೇತು ಸೂರ್ಯನ ಸಮೀಪ ಬಂದು ಹೋಗುತ್ತಿದೆ.

ಉಳಿದ ಎರಡು ಧೂಮಕೇತುಗಳಲ್ಲಿ ಅಟ್ಲಸ್ ಭಾರೀ ವಿಶೇಷ. ಅದು ಉಳಿದ ಲೆಮನ್ ಹಾಗೂ ಸ್ವಾನ್ ಧೂಮಕೇತುಗಳಂತೆ ನಮ್ಮ ಸೌರವ್ಯೂಹದ ಹೊರವಲಯ ಊರ್ಸ್ ಕ್ಲೌಡ್ ನಿಂದ ಬಂದುದಲ್ಲ. ಈ ಅಟ್ಲಸ್ ನಮ್ಮ ಸೌರವ್ಯೂಹ ದ ಹೊರಗಿನಿಂದ ಅನಂತ ಆಕಾಶದಿಂದ ಬಂದಿದೆ ಎಂದು ತಿಳಿದಿದೆ. ಅದರ ಅಧ್ಯಯನ ಹೊಸ ಹೊಸ ವಿಚಾರಗಳನ್ನು ಉಸುರಿದೆ. ಅದರಲ್ಲಿರುವ ಖನಿಜಗಳು ವಿಶ್ವ ಸೃಷ್ಟಿಯ ಅಧ್ಯಯನಕ್ಕೆ ಹೊಸ ಆಯಾಮವನ್ನು ಕೊಡುತ್ತಿದೆ. 

ಚಂದ್ರನನ್ನ ಬಿಟ್ಟರೆ ರಾತ್ರಿಯ ಆಕಾಶದಲ್ಲಿ ಧೂಮಕೇತುಗಳೇ ಚೆಂದ. ಸೂರ್ಯನ ಸಮೀಪ ದಲ್ಲಿರುವಾಗ ಉದ್ದುದ್ದ ಬಾಲಬೆಳೆಸಿಕೊಂಡು ಖಗೋಳ ವೀಕ್ಷಕನ ಮನ ಸೂರೆಗೊಳ್ಳುತ್ತವೆ.

ಈಗ ಈ ಧೂಮಕೇತುಗಳೂಂದಿಗೆ ಪ್ರತೀವರ್ಷ ಈ ಸಮಯದಲ್ಲಿ ಸಂಭವಿಸುವ ಹ್ಯಾಲಿ ಧೂಮಕೇತುವಿನ ದೂಳಿನ ಉಲ್ಕಾಪಾತ , ಅಮಾವಾಸ್ಯೆಯ ಕತ್ತಲ ಆಕಾಶವನ್ನು ರಂಗೇರಿಸಲಿವೆ.

~ಡಾ ಎ ಪಿ ಭಟ್ ಉಡುಪಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು