ಜಯಂಟ್ಸ್ ಗ್ರೂಪ್ ಆಫ್ ಉಡುಪಿ ಇದರ ಪ್ರಾಯೋಜಕತ್ವದಲ್ಲಿ ಜಯಂಟ್ಸ್ ಗ್ರೂಪ್ ಆಫ್ ಮಣಿಪಾಲ್ ತಿರಂಗಾ ನೂತನ ಸಂಸ್ಥೆ ಉದ್ಘಾಟನಾ ಸಮಾರಂಭ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಜಯಂಟ್ಸ್ ವೆಲ್ಫೇರ್ ಫೌಂಡೇಶನ್ ಮುಂಬೈ ಸೆಂಟ್ರಲ್ ಕಮಿಟಿ ಸದಸ್ಯ ದಿನಕರ್ ಅಮೀನ್, ಉದ್ಘಾಟಿಸಿ ಸಂಸ್ಥೆ ಬಗ್ಗೆ ಮಾಹಿತಿ ನೀಡಿದರು.
ಜಯಂಟ್ಸ್ ಫೆಡರೇಶನ್ ಅಧ್ಯಕ್ಷ ತೇಜಶ್ವರ್ ರಾವ್ ಶುಭ ಹಾರೈಸಿದರು.
ನೂತನ ಸದಸ್ಯರಿಗೆ ಫೆಡರೇಶನ್ ಪದಾಧಿಕಾರಿ ಗೋಪಾಲ್ ನುಗ್ಗೆಹಳ್ಳಿ ಪ್ರಮಾಣವಚನ ಬೋಧಿಸಿದರು. ನೂತನ ಅಧ್ಯಕ್ಷ ಕೃಷ್ಣ ಪೂಜಾರಿ ಮತ್ತು ತಂಡದ ಪದ ಪ್ರಧಾನ ಅಧಿಕಾರಿ ತೇಜೇಶ್ವರ್ ರಾವ್ ರವರು ಪದ ಪ್ರದಾನ ನೆರವೇರಿಸಿದರು.
ಫೆಡರೇಶನ್ ಉಪಾಧ್ಯಕ್ಷ ದೀಪಕ್ ಬೋಜ್ ಸಂಸ್ಥೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಮಾನವ ಹಕ್ಕು ಕೌನ್ಸಿಲ್ ಅಧ್ಯಕ್ಷ ಪ್ರಸಾದ್ ರೈ ,ಬ್ರಹ್ಮಾವರ ಠಾಣಾ ಎಎಸ್ಐ ಜಯಕರ್ ಐರೋಡಿ, ಕುಂದಾಪುರ ತಾಲೂಕು ಆಸ್ಪತ್ರೆಯ ವೈದ್ಯೆ ಡಾ. ವಿಜಯಲಕ್ಷ್ಮಿ ನಾಯಕ್, ಲಯನ್ಸ್ ಉಪಗವರ್ನರ್ ಹರಿಪ್ರಸಾದ್ ರೈ ಭಾಗವಹಿಸಿ ಮಾತನಾಡಿದರು.
ಜಯಂಟ್ಸ್ ಗ್ರೂಪ್ ಆಫ್ ಉಡುಪಿ ಅಧ್ಯಕ್ಷ ವಿನಯ್ ಕುಮಾರ್ ಪೂಜಾರಿ, ಕಾರ್ಯದರ್ಶಿ ದಿವಾಕರ್ ಪೂಜಾರಿ ಉಪಸ್ಥಿತರಿದ್ದರು.
ಸಿದ್ದಬಸಯ್ಯಸ್ವಾಮಿ ಚಿಕ್ಕಮಠ, ಇಕ್ಬಾಲ್ ಮನ್ನಾ, ವಾದಿರಾಜ್ ಸಾಲ್ಯಾನ್ ಅತಿಥಿಗಳ ಪರಿಚಯ ನೀಡಿದರು. ನೂತನ ಕಾರ್ಯದರ್ಶಿ ಪ್ರದೀಪ್ ಕುಮಾರ್ ವಂದಿಸಿದರು. ಶಾರದಾ ಲಾವಣ್ಯ ಕೋಟ್ಯಾನ್, ಮೋಹಿತ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ರಾಘವೇಂದ್ರ ಕವಾ೯ಲು ನಿರೂಪಿಸಿದರು.
ಈ ಸಂದರ್ಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.

0 ಕಾಮೆಂಟ್‌ಗಳು