ನೀಲಾವರ ಗೋಶಾಲೆಯಲ್ಲಿ ಅ.22ರಂದು ದೀಪಾವಳಿ ಪಾಡ್ಯದ ಸಂದರ್ಭದಲ್ಲಿ ಸಾಮೂಹಿಕ ಗೋಪೂಜೆ ಹಾಗೂ ಗೋಗ್ರಾಸ ಸೇವೆಯು ನೀಲಾವರ ಗೋಗ್ರಾಸ ತಂಡದ ವತಿಯಿಂದ, ಪೇಜಾವರ ಮಠದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ನಡೆಯಿತು.
ಸುಮಾರು 1700 ಕ್ಕೂ ಮಿಕ್ಕ ದನ-ಕರುಗಳಿಗೆ ಕಾಯಿ ಹಿಂಡಿ, ಎಳ್ಳು ಹಿಂಡಿ, ಗೋಪಿ ಹಿಂಡಿ, ಉಪ್ಪು, ಬೆಲ್ಲ ಹಾಗೂ ಗಂಜಿಯ ಮಿಶ್ರಣದಿಂದ ತಯಾರಿಸಿದ ಗೋಗ್ರಾಸವನ್ನು ತಂಡದ ಸದಸ್ಯರು ಹಾಗೂ ಗೋಪ್ರಿಯರು ಸೇರಿ ಎಲ್ಲಾ ದನ-ಕರುಗಳಿಗೆ ನೀಡಿದರು.
ಇದೇ ಸಂಧರ್ಭದಲ್ಲಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆಯನ್ನು ನೆರೆದಿದ್ದ ಭಕ್ತರು ಪಡೆದರು.



0 ಕಾಮೆಂಟ್‌ಗಳು