Header Ads Widget

ಗೋಸೇವೆ ಹಲವು ವಿಧ ಹಲವು ಬಗೆ...

ಗೋವಿನ ಬಗೆಗಿನ‌ ಭಕ್ತಿ, ಆ ಭಾವುಕತೆಯಿಂದಲೇ ಅನೇಕ ಕಡೆಗಳಲ್ಲಿರುವ ಗೋಶಾಲೆಗಳಲ್ಲಿ ನೂರಾರು ಮಂದಿ ಹಲವು ಬಗೆಗಳಲ್ಲಿ ಗೋಸೇವೆಯಲ್ಲಿ ನಿರತರಾಗಿರುವುದು ಹೆಮ್ಮೆಯ ಸಂಗತಿ. ಗೋರಕ್ಷಣೆಯ ಆಂದೋಲನದಲ್ಲಿ ಸಮಾನ‌ಮನಸ್ಕ‌ಜನ ಕೈಜೋಡಿಸುತ್ತಿರುವುದು ಸ್ವಲ್ಪ ನೆಮ್ಮದಿ ಕೊಡುವ ಸಂಗತಿಗಳಾಗಿವೆ. ಒಂದಷ್ಡು ಜನ ಗೋಶಾಲೆಗಳಿಗೆ ದೇಣಿಗೆ ನೀಡುವುದು, ಮತ್ತೊಂದಷ್ಟು ಜನ ತಾವೇ ಒಂದು ತಂಡ ಕಟ್ಕೊಂಡು ಜನ್ಮದಿನ, ಮದುವೆಯ ವರ್ದಂತಿ ಗೃಹಪ್ರವೇಶ, ಹಬ್ಬ ಹರಿದಿನಗಳು ಇತ್ಯಾದಿ ನಿಮಿತ್ತ ಗೋಶಾಲೆಗಳಿಗೆ ಅಪಾರ ಪ್ರಮಾಣದಲ್ಲಿ ಗೋವಿನ‌ಹಿಂಡಿ ಒದಗಿಸುವ ಕಾರ್ಯ, ಮತ್ತೊಂದಷ್ಟು ಯುವಕರ ತಂಡ ಗೋವುಗಳಿಗೆ ಭಕ್ತರಿಂದ ಸೇವಾರೂಪದಲ್ಲಿ ನವಧಾನ್ಯ ಮಿಶ್ರಿತ ಪಾಯಸ ಸೇವೆಗಳನ್ನು ನಡೆಸುವುದು, ಇನ್ನೊಂದಷ್ಟು ಬೇರೆ ಬೇರೆ ವೃತ್ತಿಗಳಿಂದ ನಿವೃತ್ತರಾದವರ ತಂಡ ಗೋಶಾಲೆಯ ಸುತ್ತ ಬೆಳೆಸಿರುವ ಸಮೃದ್ಧ ಹುಲ್ಲನ್ನು ಯಾವುದೇ ಪ್ರಚಾರವಿಲ್ಲದೆ ದಿನವಹಿ ಕಟಾವ್ ಮಾಡಿ ಗೋವುಗಳಿಗೆ ಉಣಿಸುವುದು, ಇನ್ನು ಕೆಲವರು ಉಳ್ಳವರಿಂದ, ಸಂಘ ಸಂಸ್ಥೆಗಳಿಂದ ಗೋಶಾಲೆಗಳಿಗೆ ಯಥಾಸಾಧ್ಯ ದೇಣಿಗೆಗಳನ್ನು ನೀಡಲು ಪ್ರೇರಣೆ ಹಾಗೂ ಸಹಕಾರ ನೀಡುವುದು ಹೀಗೆ ಬಹುವಿಧಗಳಿಂದ ಗೋಸೇವೆಗಳನ್ನು ನಡೆಸ್ತಾ ಇರೋದನ್ನು ಬಹಳ ಧನ್ಯತೆಯಿಂದ ಗೋಪೂಜೆಯ ದಿನ‌ ಸ್ಮರಿಸುವುದು ಅತ್ಯಂತ ಸಾಂದರ್ಭಿಕ ಅನ್ನಿಸ್ತದೆ.

 *ಚಿತ್ರ : .*

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು