ಜೆಸಿಐ ಉಡುಪಿ ಇಂದ್ರಾಳಿ, ಜೆಸಿಐ ಅಲೂಮ್ನೈ ಕ್ಲಬ್. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ದಂತ ವೈದ್ಯಕೀಯ ವಿಭಾಗ ಕೆಎಂಸಿ ಮಣಿಪಾಲ ಇವರ ಸಂಯುಕ್ತ ಆಶಯದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಡನಿಡಿಯೂರು, ಉಚಿತ ವೈದ್ಯಕೀಯ ಶಿಬಿರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗ್ರೀನ್ ರೆಮಿಡಿಸ್ ಸಂಸ್ಥೆಯ ಮುಖ್ಯಸ್ಥ ಪಿ.ಎಂ.ವಿ ಹೆಬ್ಬಾರ್, ಕಾಯಿಲೆ ಬರುವ ಮುಂಚೆ ಸರಿಯಾದ ರೀತಿಯಲ್ಲಿ ಆರೋಗ್ಯ ತಪಾಸಣೆ ಮಾಡಿದ್ದಲ್ಲಿ ಉತ್ತಮ ರೀತಿಯ ಜೀವನ ಸಾಗಿಸಲು ಸಾಧ್ಯ ಹೀಗಾಗಿ ಈ ರೀತಿಯ ಶಿಬಿರಗಳು ಬಹಳಷ್ಟು ಜನರಿಗೆ ಪ್ರಯೋಜನವಾಗುತ್ತವೆ ಎಂದರು.
ಉದ್ಯಮಿ ರಾಜಕೀಯ ಮುಖಂಡ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ. ನಾವು ನಮ್ಮ ವಾಹನಗಳನ್ನು ಸರಿಯಾದ ರೀತಿಯಲ್ಲಿ ಕಾಪಾಡುತ್ತೇವೆ ಆದರೆ ನಮ್ಮ ಆರೋಗ್ಯದ ಕುರಿತು ನಿರ್ಲಕ್ಷ್ಯ ವಹಿಸುತ್ತೇವೆ ಇದು ಸಲ್ಲದು ಆರೋಗ್ಯವೇ ಭಾಗ್ಯ ಎಂದರು.
ವೇದಿಕೆಯಲ್ಲಿ ಬಡ ನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಯಶೋಧಾ ಆಚಾರ್ಯ. ಸದಸ್ಯ ಪ್ರವೀಣ್ ಕಾಂಚನ್, ಒಕ್ಕೂಟದ ಅಧ್ಯಕ್ಷೆ ಸುಮಿತ್ರ ಸದಾನಂದ ಕೋಟ್ಯಾನ್, ಶಾಲಾ ಮುಖ್ಯ ಶಿಕ್ಷಕಿ ಸುನಿತಾ ಎನ್.ಎಸ್, ಪಂಡರಿನಾಥ ಭಜನಾ ಮಂಡಳಿ ಅಧ್ಯಕ್ಷ ರಾಮಪ್ಪ ಸಾಲಿಯನ್, ಡಾ. ಶ್ರಮ್ಯ ಶೆಟ್ಟಿ, ಡಾ. ದಿವ್ಯಾನಿ, ಮನು ಮುಂತಾದವರು ಉಪಸ್ಥಿತರಿದ್ದರು ಜೆಸಿಐ ಉಡುಪಿ ಇಂದ್ರಾಳಿ ಅಧ್ಯಕ್ಷ ರಿತೇಶ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು.ಶಿಬಿರದ ನಿರ್ದೇಶಕ ಖ್ಯಾತ ವೈದ್ಯರಾದ ಡಾ. ವಿಜಯ್ ನೆಗಳೂರು ಪ್ರಸ್ತಾವನೆಗೈದರು. ಡಾ. ಚಿತ್ರಾ ನೆಗಳೂರು ಸ್ವಾಗತಿಸಿದರು. ಪೂವ೯ ಅಧ್ಯಕ್ಷ ಕೀರ್ತೇಶ್ ವಂದಿಸಿದರು.ರಾಘವೇಂದ್ರ ಕವಾ೯ಲು ನಿರೂಪಿಸಿದರು.
ಸುಮಾರು 100 ಕ್ಕೂ ಹೆಚ್ಚಿನ ಜನರು ಶಿಬಿರದ ಪ್ರಯೋಜನ ಪಡೆದುಕೊಂಡರು.
0 ಕಾಮೆಂಟ್‌ಗಳು