Header Ads Widget

ನವೆಂಬರ್ ಮೊದಲ ವಾರದಲ್ಲಿ ಕಟಪಾಡಿ ಅಂಡರ್ ಪಾಸ್ ಕಾಮಗಾರಿ ಆರಂಭ!

ರಾಷ್ಟ್ರೀಯ ಹೆದ್ದಾರಿ ೬೬ರ ಕಟಪಾಡಿ ಜಂಕ್ಷನ್ ಸಮೀಪ ಅಂಡರ್ ಪಾಸ್ ಕಾಮಗಾರಿ ಆರಂಭಿಸುವ ಕುರಿತು ರಾಷ್ಟ್ರೀಯ ಹೆದ್ದಾರಿ ಇಲಾಖಾಧಿಕಾರಿಗಳೊಂದಿಗೆ ಸಂಸದರು, ಶಾಸಕರು, ಜನಪ್ರತಿನಿಧಿಗಳು ಮತ್ತು ಉಡುಪಿ ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ ನಡೆಸಿದರು.

ಉಡುಪಿ ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅವರು ಸ್ಥಳ ಪರಿಶೀಲನೆ ನಡೆಸಿ, ಕಾಮಗಾರಿ ವೇಳೆ ಸರ್ವೀಸ್ ರಸ್ತೆ, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಗತ್ಯ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಚರ್ಚಿಸಿದರು.

ಕಟಪಾಡಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅಂಡರ್ ಮತ್ತು ಓವರ್ ಪಾಸ್ ಕಾಮಗಾರಿಯು ಮಳೆಯ ಹಿನ್ನೆಲೆಯಲ್ಲಿ ವಿಳಂಬವಾಗುತ್ತಿದ್ದು, ನವೆಂಬರ್ ಮೊದಲ ವಾರದಲ್ಲಿ ಕಾಮಗಾರಿಗೆ ಚಾಲನೆ ದೊರೆಯಲಿದೆ.

ಕಾಮಗಾರಿ ವೇಳೆ ವಾಹನ ಚಾಲಕರಿಗೆ ಹಾಗೂ ಜನಸಾಮಾನ್ಯರ ಓಡಾಟಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದರು.

ಕಟಪಾಡಿ ಅಂಡ‌ರ್ ಪಾಸ್ ನಿರ್ಮಾಣ ಸಂಬಂಧ 2025ರ ಮಾರ್ಚ್ ನಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಕಟಪಾಡಿ ಜಂಕ್ಷನ್‌ನಿಂದ ಎಡ-ಬಲ ಸೇರಿ ಒಟ್ಟು 550 ಮೀ. ಉದ್ದದವರೆಗೆ ಕಾಮಗಾರಿ ನಡೆಯಲಿದೆ. 5.5 ಮೀ. ಎತ್ತರ ಹೊಂದಿರುತ್ತದೆ. ನ್ಯಾಶನಲ್ ಇನ್‌ಫ್ರಾ ಪ್ರಾಜೆಕ್ಟ್ ಕಂಪೆನಿ ಕಾಮಗಾರಿ ವಹಿಸಿಕೊಂಡಿದ್ದು, ಕಿನ್ನಿಮೂಲ್ಕಿ ಗೋಪುರದ ಬಳಿಯ ಮಾದರಿಯ ಕಟಪಾಡಿ ಅಂಡರ್ ಪಾಸ್ ನಂತೆ ರಾ.ಹೆ. ನಿರ್ಮಾಣವಾಗಲಿದೆ. ಕಟಪಾಡಿ ಜಂಕ್ಷನ್ ಕೂಡ ಸದಾ ಟ್ರಾಫಿಕ್ ಜಾಮ್ ತಾಣವಾಗಿ ಗುರುತಿಸಿಕೊಂಡಿದ್ದು, ದಿನನಿತ್ಯದ ಸಂಕಷ್ಟಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡುವಲ್ಲಿ ಅಂಡ‌ರ್ ಪಾಸ್ ನಿರ್ಮಾಣದ ಕುರಿತು ಕಾಮಗಾರಿ ಕೈಗೊಳ್ಳಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು