ಪೂರ್ಣಪ್ರಜ್ಞ (ಸ್ವಾಯತ್ತ) ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ (IQAC) ಆಶ್ರಯದಲ್ಲಿ ವಿಜ್ಞಾನ ಸಂಘದ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಡಾ.ವಿಜಯಲಕ್ಷ್ಮೀ ಭಟ್ ಸಹಾಯಕ ಪ್ರಾಧ್ಯಾಪಕಿ, ಮುಖ್ಯಸ್ಥೆ, ಸಸ್ಯಶಾಸ್ತ್ರ ವಿಭಾಗ.ಪಿಪಿಸಿ. ಇವರು ಆಗಮಿಸಿದ್ದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ "ಕಾಲೇಜಿನ ವಿಜ್ಞಾನ ಸಂಘವು ನಡೆಸುವ ವಿವಿಧ ಚಟುವಟಿಕೆಗಳು ಇಲ್ಲಿನ ವಿದ್ಯಾರ್ಥಿಗಳ ಸರ್ವಾಂಗಿಣ ಭೌದ್ಧಿಕ ಬೆಳವಣಿಗೆಗೆ ಪೂರಕ ವಾಗಿರುತ್ತವೆ ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿ ಸಕ್ರಿಯವಾಗಿ ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂದು ತಿಳಿಸಿದರು.
ಕಾರ್ಯದಲ್ಲಿ ಶ್ರೀಮತಿ ಪ್ರತಿಭ ಆಚಾರ್ಯ, ಮುಖ್ಯಸ್ಥೆ , ಭೌತಶಾಸ್ತ್ರ ವಿಭಾಗ. ಡಾ.ಲಕ್ಷ್ಮೀಶ್ ರಾವ್ ಆಂತರಿಕ ಗುಣಮಟ್ಟ ಭರವಸೆ ಕೋಶದ ಸದಸ್ಯರು, ಡಾ.ಸೌಮ್ಯಶೆಟ್ಟಿ, ವಾಣಿಜ್ಯ ವಿಭಾಗ, ಉಪಸ್ಥಿತರಿದ್ದರು. ಡಾ.ಕರಮಚಂದ್ ಕಿಶೋರ್ ವಿಜ್ಞಾನ ಸಂಘ ಸಂಯೋಜಕರು ಅಥಿತಿಗಳನ್ನು ಸ್ವಾಗತಿಸಿದರು.
ಕಾರ್ಯಕ್ರಮದ ವಂದನಾರ್ಪಣೆಯನ್ನು ಡಾ.ನಿಷ್ಕಲ ಸಹಾಯಕ ಪ್ರಾಧ್ಯಾಪಕಿ, ಭೌತಶಾಸ್ತ್ರ ವಿಭಾಗ ಇವರು ನೆರವೇರಿಸಿದರು.

0 ಕಾಮೆಂಟ್‌ಗಳು