Header Ads Widget

ಯುಪಿಎಂಸಿ- ಬ್ಯಾಟ್ ಆ್ಯಂಡ್ ನೆಟ್ ಚಾಲೆಂಜ್ - 2025 ಕ್ಕೆ ಚಾಲನೆ

ಉಡುಪಿ, ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಆಯ್ದ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗಾಗಿ ಒಂದು ದಿನದ ಕ್ರಿಕೆಟ್ ಮತ್ತು ಥ್ರೋ ಬಾಲ್ ಪಂದ್ಯಕೂಟ ಬ್ಯಾಟ್ ಆ್ಯಂಡ್ ನೆಟ್ ಚಾಲೆಂಜ್ ಎಂಬ ಶೀರ್ಷಿಕೆಯಲ್ಲಿ ಅಕ್ಟೋಬರ್ 25 ರಂದು ಉದ್ಘಾಟಿಸಲ್ಪಟ್ಟಿತು.

ಕಾಲೇಜಿನ ಹಳೆ ವಿದ್ಯಾರ್ಥಿ ಶ್ರೀ ರೋಷನ್ ಪೂಜಾರಿ ಪಂದ್ಯಾಟವನ್ನು ಉದ್ಘಾಟಿಸಿ, ಅವರ ಅಂದಿನ ಕಾಲೇಜು ಅನುಭವವನ್ನು ಹಂಚಿಕೊಂಡರು. 

ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ವಿದ್ಯಾರ್ಥಿನಿಯರಿಗಾಗಿ ಆಯೋಜಿಸಿದ್ದ ಥ್ರೋ ಬಾಲ್ ಪಂದ್ಯಕೂಟ ಉದ್ಘಾಟಿಸಿದರು.

ಹಳೆ ವಿದ್ಯಾರ್ಥಿಗಳಾದ ಸೂರಜ್ ಮತ್ತು ಪ್ರಜ್ವಲ್ ಕಾಮತ್ ಮಾತನಾಡಿ ಇಂದಿನ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಕ್ರೀಡಾಪಟುಗಳು ಬಿಬಿಎ , ಬಿ.ಕಾಮ್, ಬಿಸಿಎ ಪದವಿ ವ್ಯಾಸಂಗಕ್ಕೆ ಇದೇ ಕಾಲೇಜಿನಲ್ಲಿ ದಾಖಲಾತಿ ಪಡೆದರೆ ಅವರ ಸಂಪೂರ್ಣ ಕ್ರೀಡಾ ವೆಚ್ಚ ಭರಿಸುವ ಭರವಸೆಯನ್ನು ನೀಡಿದರು.

ಹಳೆ ವಿದ್ಯಾರ್ಥಿ ಶ್ರೀ ಗಿರೀಶ್ ಕಾಮತ್ ಈ ಸಂಸ್ಥೆಯಲ್ಲಿ ಕಲಿತ ನಾನು ಅತ್ಯುತ್ತಮ ಸ್ವಯಂ ಸೇವಕ ಪ್ರಶಸ್ತಿಯನ್ನು ಪಡೆದಿದ್ದೆ ಎಂಬುದನ್ನು ಸ್ಮರಿಸಿದರು.

ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು.

ಉಪ ಪ್ರಾಚಾರ್ಯ ರಾಧಾಕೃಷ್ಣ ರಾವ್, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಪ್ರಭಾ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತೃತೀಯ ಬಿ.ಕಾಮ್ ವರ್ಷ ಕಾಮತ್ ಸ್ವಾಗತಿಸಿದರು. ತೃತೀಯ ಬಿ ಬಿ ಎ ಕಾವ್ಯ ವಂದಿಸಿದರು, ಸನ್ನಿಧಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು