Header Ads Widget

ಬ್ರಹ್ಮಾವರ ಅಂಜಲೀಸ್ ವಿಜಯಲಕ್ಷ್ಮೀ ಸಾರೀಸ್ ವತಿಯಿಂದ ಬ್ರಹತ್ ಸೀರೆ ಮೇಳ

ದೀಪಾವಳಿಯ ಸಂದರ್ಭ ಅಕ್ಟೋಬರ್ ೧೭, ೧೮ ಮತ್ತು ೧೯ರಂದು ಅಂಜಲೀಸ್ ವಿಜಯಲಕ್ಷ್ಮೀ ಸಾರೀಸ್ ವತಿಯಿಂದ ಬ್ರಹ್ಮಾವರದ ಕೃಷಿಕೇಂದ್ರ ಮುಂಭಾಗದಲ್ಲಿರುವ ಅಂಜಲೀಸ್ ವಿಜಯಲಕ್ಷ್ಮೀ ಸಾರೀಸ್ ಸ್ಟೋರ್ (ಮಳಿಗೆ)ನಲ್ಲಿ ಬೃಹತ್ ಸೀರೆ ಮೇಳ ನಡೆಯಲಿದ್ದು ಸುಮಾರು ೫೦ ಸಾವಿರ ಸೀರೆಗಳನ್ನು ಸ್ಟಾಕ್ ಮಾಡಲಾಗಿದೆ ಎಂದು ಅಂಜಲೀಸ್ ವಿಜಯಲಕ್ಷ್ಮೀ ಸಾರೀಸ್ ಮಾಲಕಿ ಶ್ರೀಮತಿ ಅಂಜಲಿ ವಿಜಯ್ ತಿಳಿಸಿದರು. ಅವರು ಇಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.

ಬ್ರಹ್ಮಾವರ ಕೃಷಿಕೇಂದ್ರದ ಎದುರು ಇರುವ ನಮ್ಮ ಸ್ಟೋರ್‌ನಲ್ಲಿ ಇದುವರೆಗೆ ರೀಟೈಲ್ ಮಾರಾಟ ಮಾಡಿಲ್ಲ. ಮೊದಲ ಬಾರಿಗೆ ರೀಟೈಲ್ ಮಾರಾಟ ಆರಂಭ ಮಾಡುತ್ತಿದ್ದೇವೆ. ಮೂರು ದಿನದ ಬೃಹತ್ ಸೀರೆ ಮೇಳದಲ್ಲಿ ಭಾರತದ ಎಲ್ಲಾ ರಾಜ್ಯಗಳ ಸೀರೆಗಳನ್ನು ಇಲ್ಲಿ ಮಾರಾಟ ಮಾಡಲಾಗುವುದು. ನಮ್ಮದೇ ಮಗ್ಗಗಳಲ್ಲಿ ಕಾಂಜೀವರಂ ಸೀರೆಗಳನ್ನು ನಾವೇ ತಯಾರು ಮಾಡಿಸಿ, ನಾವೇ ಪ್ರಿಂಟಿಂಗ್ ಮಾಡಿ ಮಾರಾಟ ಮಾಡುತ್ತಿದ್ದೇವೆ. ಮುಂದೆ ಬ್ರಹ್ಮಾವರದಲ್ಲೇ ಒಂದು ಪ್ರಿಂಟಿಂಗ್ ಯುನಿಟ್ ಮಾಡಲಿದ್ದೇವೆ. ಇಲ್ಲಿಯೇ ಮಗ್ಗಗಳು ನೇಕಾರರನ್ನು ಕರೆಸಿಕೊಂಡು ಇಲ್ಲಿಯೇ ಸೀರೆಗಳನ್ನು ತಯಾರು ಮಾಡಿಸಿ ಜನರಿಗೆ ಕೊಡಲಿದ್ದೇವೆ. ಈ ಬಾರಿಯ ಸೀರೆ ಮೇಳದಲ್ಲಿ ಸಾಕಷ್ಟು ರಿಯಾಯಿತಿ ಬೆಲೆಯಲ್ಲಿ ಸೀರೆಗಳನ್ನು ನಾವು ಮಾರಾಟ ಮಾಡುತ್ತಿದ್ದೇವೆ. ದೀಪಾವಳಿಯ ಸಂದಭವಾದ್ದರಿಂದ ಸುಮಾರು ೮೦೦-೯೦೦ ರೂ ಬೆಲೆಯ ಸೀರೆಯನ್ನು ನಾವು ರೂ.೫೯೯ಕ್ಕೆ ಮಾರಾಟ ಮಾಡಲಿದ್ದೇವೆ. ಸಾಫ್ಟ್ ಸಿಲ್ಕ್ ಸೀರೆಯನ್ನು ರೂ. ೧೫೦೦ ಬೆಲೆಯಲ್ಲಿ ಮಾರಾಟ ಮಾಡಲಿದ್ದೇವೆ. ನಾವೇ ತಯಾರಿಸಿ ಎಂಬ್ರಾಯ್ಡರಿ ಮಾಡಿದ ಸೀರೆ, ಕಾಟನ್ ಸೀರೆಗಳು, ಲೆನಿನ್ ಸೀರೆಗಳು ಕೂಡ ಇವೆ. ಅತಿ ಕಡಿಮೆ ಬೆಲೆಯ ಸೀರೆಗಳಲ್ಲದೆ ೧೦ಸಾವಿರ, ೧೫ ಸಾವಿರ, ೧.೫೦ ಲಕ್ಷ ಬೆಲೆ ಸೀರೆ ಕೂಡ ಮಾರಾಟ ಮಾಡಲಿದ್ದೇವೆ. ೧.೫೦ ಲಕ್ಷ ಸೀರೆಗೆ ಗೋಲ್ಡ್ ಹಾಕಿ ಸಿದ್ದಪಡಿಸಿದ್ದೇವೆ. ಆ ಸೀರೆಯಲ್ಲಿ ಎಷ್ಟು ಪರ್ಸೆಂಟೇಜ್ ಗೋಲ್ಡ್ ಇದೆ ಎಂಬ ಬಗ್ಗೆ ರಿಪೋರ್ಟ್ ಕೊಡಲಿದ್ದೇವೆ. ಅದರ ಸಿಲ್ಕ್‌ಗೂ ಗ್ಯಾರೆಂಟಿ ಕೊಡಲಿದ್ದೇವೆ. ಸಾಧಾರಣ ಈಗ ಒಂದೂವರೆ ಲಕ್ಷ ಬೆಲೆ ಇದ್ದರೆ ೧೦ ವರ್ಷ ಬಿಟ್ಟು ಅದನ್ನು ಮಾರಿದರೂ ಅದರ ದುಡ್ಡು ಖರೀದಿಸಿದ ಗ್ರಾಹಕರಿಗೆ ಸಿಗಲಿದೆ. ಇಂತಹ ಸೀರೆಗಳನ್ನು ಹೂಡಿಕೆಯಾಗಿಯೂ ಖರೀದಿಸಬಹುದಾಗಿದೆ. ೩೦-೪೦ ರೀತಿಯ ಸೀರೆಗಳಿದ್ದು ಎಲ್ಲಾ ರಾಜ್ಯಗಳ ಸೀರೆಗಳ ಸ್ಟಾಕ್ ಮಾಡಿದ್ದೇವೆ. ಆದ್ದರಿಂದ ಸೀರೆ ಮೇಳಕ್ಕೆ ಸಾರ್ವಜನಿಕರು ಆಗಮಿಸುವಂತೆ ಅಂಜಲಿ ವಿಜಯ್ ಕೋರಿಕೊಂಡಿದ್ದಾರೆ.

 ಸುಮಾರು ೩ವರೆ ಎಕ್ರೆ ಜಾಗ ಖರೀದಿ ಮಾಡಿದ್ದು ಈ ಜಾಗದಲ್ಲಿ ಮಗ್ಗಗಳನ್ನು ಹಾಕಿ ಇಲ್ಲಿನ ಜನರಿಗೆ ತರಬೇತಿ ನೀಡಿ ಜನರಿಗೆ ಕೆಲಸ ಕೊಡಲಿದ್ದೇವೆ. ತರಬೇತಿ ಪಡೆದ ನಂತರ ಮನೆಯಲ್ಲೇ ಮಗ್ಗ ಹಾಕಿಕೊಂಡಲ್ಲಿ ಅಂತವರಿಗೆ ವಿಜಯಲಕ್ಷ್ಮೀ ಸಾರೀಸ್ ವತಿಯಿಂದಲೇ ನಾವು ಕೆಲಸ ಕೊಡಲಿದ್ದೇವೆ. ಅವರು ಸಿದ್ದಪಡಿಸುವ ಸೀರೆಯನ್ನು ನಾವೇ ತೆಗೆದುಕೊಳ್ಳಲಿದ್ದೇವೆ. ಬ್ರಹ್ಮಾವರ ಸುತ್ತಮುತ್ತ ಅಲ್ಲಲ್ಲಿ ಮೀಟಿಂಗ್‌ಗಳನ್ನು ಮಾಡಲಿದ್ದು ಅಲ್ಲಿ ಕೆಲಸ ಮಾಡುವ ಆಸಕ್ತರನ್ನು ಗುರುತಿಸಿ ಅವರಿಗೆ ತರಬೇತಿ ನೀಡಲಿದ್ದೇವೆ. ನಮ್ಮ ಊರಿನ ಜನರಿಗೂ ಒಂದಷ್ಟು ಕೆಲಸ ಕೊಡಿಸುವ ಉದ್ದೇಶವೂ ಇದೆ ಎಂದು ಅಂಜಲಿ ವಿಜಯ್ ತಿಳಿಸಿದರು. .

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು