Header Ads Widget

ರೇಡಿಯೊ ಮಣಿಪಾಲ್ ನ ಕಥೆ ಕೇಳೋಣಕ್ಕೆ 179 ರ ಸಂಭ್ರಮ

ಮಣಿಪಾಲ ಮಾಹೆಯ ಎಂ.ಐ.ಸಿ ಕ್ಯಾಂಪಸ್ ನಲ್ಲಿರುವ ರೇಡಿಯೊ ಮಣಿಪಾಲ್ 90.4 ಮೆಗಾಹರ್ಟ್ಝ್ ಸಮುದಾಯ ಬಾನುಲಿ ಕೇಂದ್ರವು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು ಘಟಕದ ಸಹಯೋಗದಲ್ಲಿ ಅರ್ಪಿಸುತ್ತಿರುವ ಕಥೆ ಕೇಳೋಣ ಸರಣಿ ಕಾರ್ಯಕ್ರಮದ 179ನೇ ಸಂಚಿಕೆ ಅಕ್ಟೋಬರ್ ತಿಂಗಳ ದಿನಾಂಕ 4ರಂದು ಶನಿವಾರ ಸಂಜೆ 4.30ಕ್ಕೆ ಪ್ರಸಾರವಾಗಲಿದೆ. ಈ ಸಂಚಿಕೆಯಲ್ಲಿ ಶಿಕ್ಷಕರಾದ ಜಯಭಾರತಿ ಸ್ವರಚಿತ ಕಥೆಯನ್ನು ವಾಚಿಸಲಿದ್ದಾರೆ. ಅಕ್ಟೋಬರ್ 5 ರಂದು ಮಧ್ಯಾಹ್ನ 12.30ಕ್ಕೆ ಇದರ ಮರುಪ್ರಸಾರವಿರುವುದು. ರೇಡಿಯೊದಲ್ಲಿ ಮಾತ್ರವಲ್ಲದೆ

 ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipal

ಮತ್ತು ಐಫೋನ್ ನ

https://itunes.apple.com/app/id6447231815 ಲಿಂಕ್ ಮೂಲಕ ರೇಡಿಯೊ ಮಣಿಪಾಲ್ ಆಪ್ ಡೌನ್‌ಲೋಡ್ ಮಾಡಿಕೊಂಡು ಈ ಕಾರ್ಯಕ್ರಮವನ್ನು ಕೇಳಬಹುದಾಗಿದೆ ಎಂದು ರೇಡಿಯೊ ಮಣಿಪಾಲ್ ನ ಪ್ರಕಟಣೆ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು