ಉಡುಪಿ: ಕೊಡವೂರು ಫ್ರೆಂಡ್ಸ್ ಹಾಗೂ ಮಹಿಳಾ ಸಮಿತಿ, ಕೊಡವೂರು ಇವರ ಆಶ್ರಯದಲ್ಲಿ ಆಪರೇಷನ್ ಸಿಂಧೂರ ವಿಜಯೋತ್ಸವ ಹಾಗೂ ಕೊಡವೂರಿನ ಅಭಿವೃದ್ಧಿಗೆ ಶ್ರಮಿಸಿದ ಕಾರ್ಯಕರ್ತರ ಸಾಧನಾ ಸಮಾವೇಶ ಕಾರ್ಯಕ್ರಮವು ಅ.18 ರಂದು ಶನಿವಾರ ಸಂಜೆ 6.00ರಿಂದ ಕೊಡವೂರು ಶಾಲಾ ವಠಾರದಲ್ಲಿ ನಡೆಯಲಿರುವುದು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾನ್ಯ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಘನ ಉಪಸ್ಥಿತಿಯನ್ನು ಯಶ್ ಪಾಲ್ ಸುವರ್ಣ ಶಾಸಕರು, ಉಡುಪಿ, ಹಾಗೂ ದಿಕ್ಸೂಚಿ ಭಾಷಣವನ್ನು ವಿಧಾನ ಪರಿಷತ್ ಶಾಸಕರಾದ ಸಿ ಟಿ ರವಿ ಇವರು ಮಾಡಲಿದ್ದಾರೆ.
ಗೌರವ ಉಪಸ್ಥಿತರಾಗಿ ರವಿರಾಜ್ ಹೆಗ್ಡೆ,ಅಧ್ಯಕ್ಷರು ಡಿ.ಕೆ.ಎಂ.ಯು.ಎಲ್ ಮಂಗಳೂರು, ಕೆ ಟಿ ಪೂಜಾರಿ ಮಾಜಿ ಅಧ್ಯಕ್ಷರು, ನಗರಾಭಿವೃದ್ಧಿ ಪ್ರಾಧಿಕಾರ, ಸಾಧು ಸಾಲ್ಯಾನ್, ನಿಕಟಪೂರ್ವ ಅಧ್ಯಕ್ಷರು ಶಂಕರ ನಾರಾಯಣ ದೇವಸ್ಥಾನ ಕೊಡವೂರು,ರಾಘವೇಂದ್ರ ರಾವ್ ಮಾಜಿ ಅಧ್ಯಕ್ಷರು, ಶಂಕರ ನಾರಾಯಣ ದೇವಸ್ಥಾನ ಕೊಡವೂರು,ಎನ್ ಭೋಜ ಕುಂದರ್ ಗುರಿಕಾರರು, ಚೆಂಡ್ಕಳ, ಕಾಳು ಸೇರಿಗಾರ್,ಮಾಜಿ ಅಧ್ಯಕ್ಷರು ಭಗವತೀ ಮಾರಿಯಮ್ಮ ಸನ್ನಿಧಿ ಕೊಡವೂರು,ನಾರಾಯಣ ಬಲ್ಲಾಳ್ ಅಧ್ಯಕ್ಷರು ಸಿ ಎ ಬ್ಯಾಂಕ್ ಕೊಡವೂರು, ಶೇಖರ ಪೂಜಾರಿ ಗರ್ಡೇ, ಲಕ್ಷ್ಮೀನಗರ ಇವರು ಇರಲಿದ್ದಾರೆ.ಹಾಗೆಯೆ ವಿಜಯ್ ಕುಮಾರ್ ಕೊಡವೂರು, ನಗರಸಭಾ ಸದಸ್ಯರು, ಕೊಡವೂರು ವಾರ್ಡ್ ಇವರು ಉಪಸ್ಥಿತಲಿರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ
0 ಕಾಮೆಂಟ್‌ಗಳು