Header Ads Widget

ಸುರತ್ಕಲ್ : ಅಪರಿಚಿತರಿಂದ ಇಬ್ನರ ಮೇಲೆ‌ ಚೂರಿ ಇರಿತ‌!

ಸುರತ್ಕಲ್ ನ ಕಾನ ಬಳಿ ನಾಲ್ಕು ಮಂದಿ ಅಪರಿಚಿತರ ತಂಡವೊಂದು ಇಬ್ನರ ಮೇಲೆ‌ ಚೂರಿ ಇರಿತ‌ ನಡೆಸಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ.‌

ಸುರತ್ಕಲ್‌ ಚೊಕ್ಕಬೆಟ್ಟು ನಿವಾಸಿ ನಿಜಾಮ್ (23) ಮತ್ತು ಕೃಷ್ಣಾಪುರ ಹಿಲ್ ಸೈಡ್ ನಿವಾಸಿ ಹಸನ್ ಮುರ್ಷಿದ್ (18) ಚೂರಿ ಇರಿತಕ್ಕೊಳಗಾದವರು ಎಂದು ತಿಳಿದು ಬಂದಿದೆ.

ಇವರಿಬ್ಬರು ತಮ್ಮ ಇತರ ಮೂರು ಮಂದಿ‌ ಸ್ನೇಹಿತರೊಂದಿಗೆ‌ 2 ದ್ವಿಚಕ್ರ‌ವಾಹದಲ್ಲಿ‌ ಕಾನ ಮಾರ್ಗವಾಗಿ ಕೃಷ್ಣಾಪುರಕ್ಕೆ‌ ಹೋಗುತ್ತಿದ್ದಾಗ ನಿಜಾಮ್ ಇದ್ದ ಬೈಕ್‌ನ ಪೆಟ್ರೋಲ್‌‌ ಖಾಲಿಯಾಗಿತ್ತು. ಹಾಗಾಗಿ ಸ್ನೇಹಿತರು ಪೆಟ್ರೋಲ್‌‌‌ ತರಲು ಹೋಗಿದ್ದರು‌.‌ ಈ‌ ವೇಳೆ‌ ಅಲ್ಲಿಗೆ ಬಂದ ನಾಲ್ಕು ಮಂದಿ‌ ಅಪರಿಚಿತರ‌‌ ತಂಡ‌ ಏಕಾಏಕಿ ನಿಜಾಮ್ ಮತ್ತು ಮುರ್ಷಿದ್‌ ಮೇಲೆ ಚಾಕುವಿನಿಂದ ದಾಳಿ ಮಾಡಿದೆ ಎನ್ನಲಾಗಿದೆ.

ಘಟನೆಯಿಂದ‌ ನಿಜಾಮ್ ನ‌ ಹೊಟ್ಟೆಗೆ ಗಂಭೀರ‌ ಗಾಯವಾಗಿದ್ದು, ಆತನನ್ನು ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ‌‌ ಸಾಗಿಸಲಾದೆ. ಕೈಗೆ ಸಣ್ಣ ಪ್ರಮಾಣದ‌ ಗಾಯವಾಗಿದ್ದ ಹಸನ್‌ ಮುರ್ಷಿದ್‌ ಮುಕ್ಕದ‌‌ ಶ್ರೀನಿವಾಸ್‌‌‌ ಆಸ್ಪತ್ರೆಯಲ್ಲಿ‌ ಚಿಕಿತ್ಸೆ‌ ಪಡೆಯುತ್ತಿದ್ದಾರೆ.

ಘಟನಾ‌‌ ಸ್ಥಳಕ್ಕೆ‌ ಸುರತ್ಕಲ್ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್‌ ನೇತೃತ್ವದ‌ ಪೊಲೀಸ್ ತಂಡ ಭೇಟಿ ನೀಡಿ ಪರಿಶೀಲನೆ‌ ನಡೆಸಿ ಪ್ರಕರಣ‌ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು