ಉಡುಪಿ ತಾಲೂಕಿನ ಮಣಿಪಾಲದಲ್ಲಿ ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಮಣಿಪಾಲ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಗಳನ್ನು ಇಮ್ರಾನ್ ಹಾಗೂ ಜೈಬಾಯ್ ಎಂದು ಗುರುತಿಸಲಾಗಿದೆ.
ಮಣಿಪಾಲದಲ್ಲಿ ಕೆಲವು ಮಸಾಜ್ ಪಾರ್ಲರ್ ಗಳಿದ್ದು ಅಲ್ಲಿ ಕೆಲವು ಮಸಾಜ್ ಪಾರ್ಲರ್ ಹೆಸರಿನಲ್ಲಿ ಹುಡುಗಿಯರನ್ನು ಇಟ್ಟುಕೊಂಡು ಅನೈತಿಕ ದಂಧೆ ನಡೆಸುತ್ತಾರೆ ಎಂದು ಆರೋಪ ಕೇಳಿಬರುತ್ತಿದೆ.
ಅ. 21 ರಂದು ಮಣಿಪಾಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್ , ಪೊಲೀಸ್ ನಿರೀಕ್ಷಕರು, ಮಣಿಪಾಲ ಪೊಲೀಸ್ ಠಾಣೆ ಇವರಿಗೆ ಮಣಿಪಾಲದಲ್ಲಿ ಬಾಡಿ ಮಸಾಜ್ ಹೆಸರಿನಲ್ಲಿ ಅಕ್ರಮ ಲಾಭಕ್ಕಾಗಿ ಮಹಿಳೆಯರನ್ನು ಇರಿಸಿ ಅಕ್ರಮ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂದು ಬಂದ ಮಾಹಿತಿ ಮೇರೆಗೆ ದಾಳಿ ಮಾಡಿ ನೊಂದ ಮಹಿಳೆಯರನ್ನು ರಕ್ಷಿಸಿ, ಆರೋಪಿತರುಗಳಾದ ಇಮ್ರಾನ್ ಹಾಗೂ ಜೈಬಾಯ್ ಅಲಿಯಾಸ್ ಎಲಿಸಾ ಎಂಬುವವರನ್ನು ವಶಕ್ಕೆ ಪಡೆದುಕೊಂಡು ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದು, ಆರೋಪಿತರುಗಳಾದ ಮಹೇಶ್ ಹಾಗೂ ಅಶೋಕ್ ತಮ್ಮ ಸ್ವಂತ ಲಾಭಕ್ಕಾಗಿ ಅಕ್ರಮವಾಗಿ ಹಣಗಳಿಸುವ ಉದ್ದೇಶದಿಂದ ಸೆಲೂನ್ & ಸ್ಪಾ ಬಾಡಿ ಮಸಾಜ್ ಸೆಂಟರ್ ಇಟ್ಟುಕೊಂಡಿರುವುದು ಕಂಡು ಬಂದಿದ್ದು ಆರೋಪಿತರುಗಳಾದ ಇಮ್ರಾನ್ ಹಾಗೂ ಜೈಬಾಯ್ ಅಲಿಯಾಸ್ ಎಲಿಸಾ ಅವರೊಂದಿಗೆ ಸೇರಿಕೊಂಡು ಅವರ ವ್ಯವಹಾರಕ್ಕೆ ಸಹಕರಿಸುತ್ತಿರುವುದು ತಿಳಿದು ಬಂದಿರುವುದಾಗಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
0 ಕಾಮೆಂಟ್‌ಗಳು