ಉಡುಪಿಗೆ ಬನ್ನಿ ತಂಡದ ನೇತೃತ್ವದಲ್ಲಿ ನವೆಂಬರ್ 22 ಶನಿವಾರ ಸಂಜೆ 4 ಗಂಟೆಯಿಂದ 5.30 ಗಂಟೆಯವರೆಗೆ ಉಡುಪಿ ತಾಲೂಕಿನ ಇಂದ್ರಾಳಿಯಲ್ಲಿ ಹಕ್ಕಿ ವೀಕ್ಷಣೆ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಅಕ್ಟೋಬರ್ 25 ರಂದು ಬ್ರಹ್ಮಾವರ ತಾಲೂಕಿನ ಹೇರೂರಿನಲ್ಲಿ ಹಕ್ಕಿ ವೀಕ್ಷಣೆಯ ಮೊದಲ ಕಾರ್ಯಕ್ರಮ ನಡೆದಿದ್ದು ಪರಿಸರ ಆಸಕ್ತರು 32 ಪ್ರಬೇಧಗಳ 65 ಹಕ್ಕಿಗಳನ್ನು ಪಟ್ಟಿ ಮಾಡಿದ್ದಾರೆ. ಹಕ್ಕಿ ವೀಕ್ಷಣೆ ಮನಸ್ಸಿಗೆ ಮುದ ನೀಡುವ ಹವ್ಯಾಸ ಮಾತ್ರವಲ್ಲದೇ, ನಿಸರ್ಗದ ಜತೆ ಬೆರೆತು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಮತ್ತಷ್ಟು ಬಲಪಡಿಸಲು ಇಂಧನ ಒದಗಿಸುತ್ತದೆ.
ಯಾರು ಭಾಗವಹಿಸಬಹುದು? ಹಕ್ಕಿ ವೀಕ್ಷಣೆಯಲ್ಲಿ ಆಸಕ್ತಿ ಇರುವವರು, ಛಾಯಾಗ್ರಾಹಕರು, ಬ್ಲಾಗ್ ರಚಿಸುವವರು ಹಾಗೂ ಪರಿಸರ ಪ್ರೇಮಿಗಳು ಹಕ್ಕಿ ವೀಕ್ಷಣೆಯಲ್ಲಿ ಭಾಗವಹಿಸಬಹುದು. ಭಾಗವಹಿಸುವಿಕೆ ಸಂಪೂರ್ಣವಾಗಿ ಉಚಿತವಾಗಿದ್ದು, ಭಾಗವಹಿಸುವವರು ಕಡ್ಡಾಯವಾಗಿ ಗೂಗಲ್ ಫಾರ್ಮ್ ಲಿಂಕ್ https://forms.gle/6os6k4JaFrRD4hiMA ಮೂಲಕ ನೊಂದಣಿ ಮಾಡಿಕೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.

0 ಕಾಮೆಂಟ್‌ಗಳು