Header Ads Widget

​ದಿ.ಸಾಲುಮರ ತಿಮ್ಮಕ್ಕ ರವರಿಗೆ ನುಡಿ ನಮನ



ಉಡುಪಿ :- ಇತ್ತೀಚಿಗೆ ಇಹಲೋಕ ತ್ಯಜಿಸಿದ ವೃಕ್ಷ ಮಾತೆ ಪದ್ಮಶ್ರೀ ಸಾಲುಮರ ತಿಮ್ಮಕ್ಕ ಅವರಿಗೆ ನುಡಿ ನಮನ ಕಾರ್ಯಕ್ರಮ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಮತ್ತು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು​ ಘಟಕ ಇದರ ವತಿಯಿಂದ ಉಡುಪಿ ಇನ್ ನಲ್ಲಿ ನ.15 ಶನಿವಾರ ನಡೆಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಖ್ಯಾತ ಉರಗತಜ್ಞ ಗುರುರಾಜ್ ಸನಿಲ್ ದಿವಂಗತ ಸಾಲುಮರ ತಿಮ್ಮಕ್ಕ ರವರು ಯಾವುದೇ ರೀತಿಯ ಪ್ರತಿಫ​ಲಾಪೇಕ್ಷೆ ಇಲ್ಲದೆ ಪರಿಸರದ ಮೇಲಿನ ಅಪಾರ ಪ್ರೀತಿಯನ್ನು ಹೊಂದಿ ನೂರಾರು ಗಿಡಗಳನ್ನು ನೆಟ್ಟು ಘೋಷಣೆ ಮಾಡಿದ್ದರು​.  ಅದನ್ನು ನೋಡಿ ವಿಶ್ವದಾದ್ಯಂತ ಪರಿಸರದ ಬಗ್ಗೆ ಅಭಿಯಾನಗಳು ನಡೆಯಲು ಸಾಧ್ಯವಾಯಿತು ಎಂದರು.


ನಿರೂಪಕ ಅವಿನಾಶ್ ಕಾಮತ್ ಮಾತನಾಡಿ ತಿಮ್ಮಕ್ಕ ಅಜ್ಜಿ ಮತ್ತು ಉಡುಪಿಗೆ ಅವಿನಾಭಾವ ಸಂಬಂಧ ವಿದೆ ಇಂದು ಅಜ್ಜಿ ವಿಶ್ವದಾದ್ಯಂತ ಪ್ರಸಿದ್ಧಿ ಪಡೆಯಲು ಉಡುಪಿಯ ಜನತೆಯ ಸಹಕಾರವು ಇತ್ತು ಎಂದು ನೆನಪು ಮಾಡಿದರು.


ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ವಿಶ್ವನಾಥ್ ಶೆಣೈ, ಮಾತನಾಡಿ ಸಾಲುಮರ ತಿಮ್ಮಕ್ಕರವರ ಹೆಸರಿನಲ್ಲಿ ಪ್ರತಿವರ್ಷ ಖ್ಯಾತ ವ್ಯಕ್ತಿಗಳನ್ನು ಉಡುಪಿಗೆ ಕರೆಸಿ ಅವರಿಂದ ಉಡುಪಿಯ ಪ್ರಮುಖವಾದ ಸ್ಥಳಗಳಲ್ಲಿ ಅರಳಿ ಮರವನ್ನು ನೆಟ್ಟು ಅವರನ್ನು ಗೌರವಿಸುವ ಕಾರ್ಯ ಮಾಡಲಾಗುವುದು ಎಂದರು.


ಸುಹಾಸoನ ಶ್ರೀನಿವಾಸ್​ ಉಪಾಧ್ಯ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಶಂಕರ್ ಮಾತನಾಡಿ ದರು​.  ಈ ಸಂದರ್ಭದಲ್ಲಿ  ಉಡುಪಿ ಇನ್ ನ ಮುಖ್ಯಸ್ಥ ನಾಗರಾಜ ಹೆಬ್ಬಾರ್, ಹಾಸ್ಯ ಭಾಷಣಕಾರ್ತಿ ಸಂಧ್ಯಾ ಶೆಣೈ, ​ಜಿಲ್ಲಾ ಕಸಾಪ ​ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾದ೯ನ್,​ ಪದಾಧಿಕಾರಿಗಳಾದ ದೀಪಾ ಚಂದ್ರಕಾಂತ್, ರಂಜನಿ ವಸಂತ್, ಸಿದ್ದ ಬಸಯ್ಯ ಸ್ವಾಮಿ ಚಿಕ್ಕ ಮಠ, ಶಶಿಕಾಂತ ಶೆಟ್ಟಿ, ಲಕ್ಷ್ಮಿಕಾಂತ್, ರಾಜೇಶ್​, ರಾಮಾಂಜಿ​ ಮುಂತಾದ​ವರು ಉಪ​ಸ್ಥಿತರಿದ್ದರು​.  


ಕಸಾಪ ತಾಲೂಕು ಅಧ್ಯಕ್ಷ ರವಿರಾಜ್ ಹೆಚ್.ಪಿ ಪ್ರಸ್ತಾವನೆಗೈದರು.​ ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ ಸ್ವಾಗತಿಸಿದರು. ಗೌ.ಕಾಯ೯ದಶಿ೯ ಜನಾದ೯ನ್‌ ಕೊಡವೂರು ನಿರೂಪಿಸಿದರು. ರಾಘ ವೇಂದ್ರ ಪ್ರಭು ಕವಾ೯ಲು ವಂದಿಸಿದರು.​ ಈ ಸಂದರ್ಭದಲ್ಲಿ ಸಾಲುಮರ ತಿಮ್ಮಕ್ಕ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು