ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜೀ ಅವರ ಮಹತ್ವಾಕಾಂಕ್ಷೆಯ ಬೃಹದ್ಯೋಜನೆಯಾದ ಜ್ಞಾನ ಭಾರತಮ್ ಮಿಶನ್ ನವೆಂಬರ್ ತಿಂಗಳ 12 ರಂದು ನವ ದೆಹಲಿಯ ವಿಜ್ನಾನ ಭವನದಲ್ಲಿ ಪ್ರಧಾನಮಂತ್ರಿಗಳಿಂದ ಚಾಲನೆಗೊಂಡಿತ್ತು. ದೇಶ ವಿದೇಶಗಳಿಂದ ಸುಮಾರು ಒಂದು ಕೋಟಿ ಹಸ್ತಪ್ರತಿಗಳನ್ನು ಡಿಜಿಟಲ್ ಗೊಳಿಸುವ ಬಹು ವೆಚ್ಚದ ಯೋಜನೆಯನ್ನು ಸಂಸ್ಕೃತಿ ಮಂತ್ರಾಲಯದ ಅಧೀನದಲ್ಲಿ ಆಯೋಜಿಸಲಾಗುತ್ತಿದೆ. ದೇಶದ ಎಲ್ಲ ರಾಜ್ಯಗಳಿಗೆ ಮುಖ್ಯ ಸಂಚಾಲಕರನ್ನಾಗಿ ಆಯ್ಕೆ ಮಾಡಲಾಗುತ್ತಿದೆ. ಈ ಬೃಹದ್ ಯೋಜನೆಗೆ ಕರ್ನಾಟಕ ರಾಜ್ಯ ಮುಖ್ಯ ಸಂಚಾಲಕರಾಗಿ ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನದ ನಿರ್ದೇಶಕರಾದ ಡಾ ಬಿ ಗೋಪಾಲಾಚಾರ್ಯರು ಆಯ್ಕೆಯಾಗಿದ್ದಾರೆ.

0 ಕಾಮೆಂಟ್‌ಗಳು