Header Ads Widget

ಮಂದಾರ್ತಿ: ಐದು ಮೇಳದ ತಿರುಗಾಟಕ್ಕೆ ಚಾಲನೆ

ಮಂದಾರ್ತಿ ಶ್ರೀದುರ್ಗಾಪರಮೇಶ್ವರಿ ದೇವಳದ ದಶಾವತಾರ ಯಕ್ಷಗಾನ೨೦೨೫-೨೬ನೇ ಸಾಲಿನ ಐದು ಮೇಳದ ತಿರುಗಾಟಕ್ಕೆ ಭಾನುವಾರ ಚಾಲನೆ ದೊರೆಯಿತು. ಬಾರಾಳಿ ಶ್ರೀ ಗಣಪತಿ ದೇವಳದಲ್ಲಿ ಗಣಹೋಮ ನಡೆಯಿತು. ಸಂಪ್ರದಾಯದಂತೆ ಕಲಾವಿದರಿಗೆ ಗೆಜ್ಜೆ ನೀಡಲಾಯಿತು. ನಂತರ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಅರ್ಚಕ ಶ್ರೀಪತಿ ಅಡಿಗ ನೇತೃತ್ವದಲ್ಲಿ ದೇವಳದ ಪ್ರಾಂಗಣದಲ್ಲಿ ಗಣಹೋಮ ಮತ್ತು ಐದೂ ಮೇಳಗಳ ಗಣಪತಿ ಪೂಜೆ ನಡೆಯಿತು. ಕಾಯಕ್ರಮದಲ್ಲಿ ದೇವಳದ ಅಧ್ಯಕ್ಷ ಹೆಚ್.ಧನಂಜಯ ಶೆಟ್ಟಿ ಮೇಳಗಳ ಭಾಗವತರಿಗೆ ಸಂಪ್ರದಾಯದಂತೆ ತಾಳ ನೀಡಿ ತಿರುಗಾಟಕ್ಕೆ ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ದೇವಳದ ಕಾರ್ಯನಿರ್ವಹಣಾಕಾರಿ ಗೋವಿಂದ ನಾಯ್ಕ ಡಿ.ಟಿ., ಅನುವಂಶಿಕ ಮೊಕ್ತೇಸರುಗಳಾದ ಹೆಚ್.ಪ್ರಭಾಕರ್ ಶೆಟ್ಟಿ, ಹೆಚ್.ಶಂಭು ಶೆಟ್ಟಿ, ಆರ್. ಶ್ರೀನಿವಾಸ ಶೆಟ್ಟಿ, ಹೆಚ್.ಜಯರಾಮ ಶೆಟ್ಟಿ, ಹೆಗ್ಗುಂಜೆ ನಾಲ್ಕು ಮನೆಯವರು, ಅರ್ಚಕ ವರ್ಗ ಮತ್ತು ಸಿಬಂದಿ ವರ್ಗದವರು, ೫ಮೇಳದ ಮುಮ್ಮೇಳ ಮತ್ತು ಹಿಮ್ಮೇಳ ಕಲಾವಿದರುಗಳು, ಯಕ್ಷಗಾನ ಸೇವೆಯ ಸೇವಾಕರ್ತರು ಮತ್ತು ಸಾವಿರಾರು ಭಕ್ತರು ಉಪಸ್ಥಿತರಿದ್ದರು.

ನಂತರ ಅನ್ನಸಂರ್ಪಣೆ ನಡೆಯಿತು. ಸಂಜೆ ಐದೂ ಮೇಳಗಳಿಂದ ಪ್ರಥಮ ದೇವರ ಸೇವೆಯಾಟ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು