Header Ads Widget

ನೃತ್ಯನಿಕೇತನ ಕೊಡವೂರು ವತಿಯಿಂದ ಕೃಷ್ಣಪ್ರೇಮ ಪ್ರಶಸ್ತಿ, ಮತ್ತು ವಿಶ್ವನೃತ್ಯಪ್ರಭಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ನೃತ್ಯನಿಕೇತನ ಕೊಡವೂರು ಸಂಸ್ಥೆಯಿಂದ ಕೊಡಲ್ಪಡುವ ಏಳನೇ ವರುಷದ ನೃತ್ಯ ಕ್ಷೇತ್ರದ ಬೇರೆ ಬೇರೆ ವಿಭಾಗಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ನೀಡುವ ಕೃಷ್ಣಪ್ರೇಮ ಪ್ರಶಸ್ತಿ, ಮತ್ತು  ವಿಶ್ವನೃತ್ಯಪ್ರಭಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ದಿನಾಂಕ 19-11-2025 ಬುಧವಾರದಂದು ಸಂಜೆ 6 ಗಂಟೆಗೆ ಉಡುಪಿಯ ಯಕ್ಷಗಾನ ಕಲಾರಂಗದ ಇನ್ಫೋಸಿಸ್ ಸಭಾಂಗಣದಲ್ಲಿ ನಡೆಯಲಿದೆ.

ಪಿಟೀಲು ವಾದ್ಯಪ್ರವೀಣ ಉಡುಪಿಯ ಪಾಡಿಗಾರು ಶ್ರೀಧರ ಆಚಾರ್ಯರವರಿಗೆ ನೃತ್ಯ ವಾದ್ಯಸಂಗೀತ ಕ್ಷೇತ್ರದಲ್ಲಿ,   ಮಂಗಳೂರಿನ ಸುನಿಲ್ ಉಚ್ಚಿಲ್ ರವರಿಗೆ ನೃತ್ಯವರ್ಣಾಲಂಕಾರ  ಮತ್ತು ವಸ್ತ್ರಾಲಂಕಾರ ಕ್ಷೇತ್ರದಲ್ಲಿ , ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯರಿಗೆ     ನೃತ್ಯಪ್ರಚಾರ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಕೃಷ್ಣ ಪ್ರೇಮ ಪ್ರಶಸ್ತಿ ಮತ್ತು ಅನೇಕ ವರುಷಗಳಿಂದ ನೃತ್ಯ ಕಲಾವಿದರಾಗಿ, ಗುರುವಾಗಿ ನೃತ್ಯಕ್ಷೇತ್ರದ ಸಾಧನೆಗಾಗಿ  ಹಿರಿಯ ಗುರುಗಳಾಗಿರುವ  ಪುತ್ತೂರಿನ  ನೃತ್ಯ ವಿದುಷಿ ಶ್ರೀಮತಿ ನಯನ ವಿ ರೈ ಯವರಿಗೆ ವಿಶ್ವ ನೃತ್ಯ ಪ್ರಭ ಪ್ರಶಸ್ತಿ ಪ್ರದಾನ   ಮತ್ತು ಕೃಷ್ಣಮೂರ್ತಿ ಉಪಾಧ್ಯಾಯ ಮತ್ತು ಕೃಷ್ಣಮೂರ್ತಿ ರಾವ್ ಹೆಸರಲ್ಲಿ ನೀಡುತ್ತಿರುವ ಯಕ್ಷಗಾನ ಕಲಿಯುತ್ತಿರುವ ನೃತ್ಯದ ವಿದ್ಯಾರ್ಥಿ ವಿದುಷಿ ವಸುಂಧರಾ ರವರಿಗೆ ವಿದ್ಯಾರ್ಥಿವೇತನವನ್ನು ನೀಡಲಿದ್ದು ಸಭಾ ಕಾರ್ಯಕ್ರಮದ ಅಧ್ಯಕ್ಷರಾಗಿ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ|| ಕೆ.ಸದಾಶಿವರಾವ್ ,ಅತಿಥಿಗಳಾಗಿ ಉಡುಪಿಯ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಮತ್ತು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷರಾಗಿರುವ ವಿಶ್ವನಾಥ್ ಶೆಣೈ ಯವರು ಭಾಗವಹಿಸಲಿರುವರು. ಸಭಾ ಕಾರ್ಯಕ್ರಮದ ಬಳಿಕ ನೃತ್ಯನಿಕೇತನ ಕೊಡವೂರು ಕಲಾವಿದರಿಂದ ನೃತ್ಯಸಿಂಚನ ಕಾರ್ಯಕ್ರಮ ನಡೆಯಲಿದೆಯೆಂದು ಸಂಸ್ಥೆಯ ಮುಖ್ಯಸ್ಥರಾಗಿರುವ ವಿದ್ವಾನ್ ಸುಧೀರ್ ರಾವ್ ಕೊಡವೂರು ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು