೧೯೮೩ ವಿಶ್ವಕಪ್ ಕ್ರಿಕೆಟ್ ವಿಜೇತ ಭಾರತ ತ೦ಡದ ಸದಸ್ಯ, ಖ್ಯಾತ ವಿಕೆಟ್ ಕೀಪರ್ ಶ್ರೀ ಸಯ್ಯದ್ ಕಿರ್ಮಾನಿಯವರು ಉಡುಪಿಯ ಪ್ರಸಾದ್ ನೇತ್ರಾಲಯಕ್ಕೆ ಭೇಟಿ ನೀಡಿದರು. ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಸಮೂಹ ಆಸ್ಪತ್ರೆಗಳ ವೈದ್ಯಕೀಯ ನಿರ್ದೇಶಕ ಹಾಗೂ ಉಡುಪಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ಇದರ ಅಧ್ಯಕ್ಷ ಡಾ. ಕೃಷ್ಣ ಪ್ರಸಾದ್ ಕೂಡ್ಲುಅವರನ್ನು ಸ್ವಾಗತಿಸಿದರು. ಈ ಸ೦ಧರ್ಭದಲ್ಲಿ ಉಡುಪಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್‌ನ ಚಟುವಟಿಕೆಗಳ ಬಗ್ಗೆ ಚರ್ಚಿಸಿದರು. ಅವರು ಭಾರತದ ಕ್ರಿಕೆಟ್ ತ೦ಡಗಳು ಇತ್ತಿಚಿನ ದಿನಗಳಲ್ಲಿ ನೀಡುತ್ತಿರುವ ಅತ್ಯುತ್ತಮ ಪ್ರದರ್ಶನ ಹಾಗೂ ಭಾರತದ ಮಹಿಳಾ ಕ್ರಿಕೆಟ್ ತ೦ಡ ವಿಶ್ವ ಕಪ್ ವಿಜಯಿಯಾದ ಬಗ್ಗೆ ಪ್ರತಿಕ್ರಿಯಿಸಿ ಸ೦ತಸ ವ್ಯಕ್ತಪಡಿಸಿದರು.

0 ಕಾಮೆಂಟ್‌ಗಳು