Header Ads Widget

ರೆಡ್‌ಕ್ರಾಸ್ : ಸಿ.ಎ. ಶಾಂತರಾಮ ಶೆಟ್ಟಿಗೆ ಅಭಿನಂದನೆ

ಉಡುಪಿ : ದಕ್ಷಿಣ ಕನ್ನಡ ಜಿಲ್ಲಾ ರೆಡ್‌ಕ್ರಾಸ್ಸಿನ ಸಭಾಪತಿಗಳಾಗಿ ಜನಹಿತ ಕಾರ್ಯದ ಮೂಲಕ ಜನಪ್ರಿಯರಾಗಿರುವ ಸಿ.ಎ. ಶಾಂತರಾಮ ಶೆಟ್ಟಿ ಅಖಿಲ ಭಾರತ ಮಟ್ಟದ ರೆಡ್‌ಕ್ರಾಸ್‌ಗೆ ಆಯ್ಕೆಯಾಗಿ ರುವುದು ಕರ್ನಾಟಕವೇ ಹೆಮ್ಮೆ ಪಡುವ ವಿಚಾರವಾಗಿದೆ. 


26 ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ ಸಭೆಯಲ್ಲಿ ಅತಿ ಹೆಚ್ಚು 22 ಮತಗಳನ್ನು ಪಡೆದು ಅವರು ರಾಷ್ಟ್ರೀಯ ಆಡಳಿತ ಮಂಡಳಿಗೆ ಆಯ್ಕೆಯಾದುದು ಅವರ ಕಾರ್ಯದಕ್ಷತೆಗೆ ಸಿಕ್ಕಿದ ಪ್ರತಿಫಲ ಎಂದು ಕರ್ನಾಟಕ ರಾಜ್ಯ ರೆಡ್‌ಕ್ರಾಸ್ ಸಭಾಪತಿ ಬಸ್ರೂರು ರಾಜೀವ ಶೆಟ್ಟಿಯವರು ಹೇಳಿದರು. 


ಅವರು ರೆಡ್ ಕ್ರಾಸ್ರಾಷ್ಟ್ರೀಯ  ಮಂಡಳಿಗೆ ಆಯ್ಕೆಯಾದ ಶಾಂತರಾಮ ಶೆಟ್ಟಿಯವರನ್ನು ಉಡುಪಿ ಜಿಲ್ಲಾ ರೆಡ್ ಕ್ರಾಸ್ ಮತ್ತು ವಿಕಲಚೇತನರ ಪುನರ್ವಸತಿ ಕೇಂದ್ರದ ವತಿಯಿಂದ ರೆಡ್‌ಕ್ರಾಸ್ ಭವನದಲ್ಲಿ ಸನ್ಮಾನಿಸಿ ಮಾತಾನಾಡುತ್ತಿದ್ದರು. 


ಕುಂದಾಪುರ ರೆಡ್ ಕ್ರಾಸ್ ಸಭಾಪತಿ ಜಯಕರ ಶೆಟ್ಟಿಯವರು ಶಾಂತರಾಮ ಶೆಟ್ಟಿಯವರ ಸೇವಾ ಕಾರ್ಯವನ್ನು ಪ್ರಶಂಸಿದರು. ಜಿಲ್ಲಾ ರೆಡ್ ಕ್ರಾಸ್ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ. ವಿ.ಜಿ ಶೆಟ್ಟಿ, ಟಿ. ಚಂದ್ರಶೇಖರ್ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಸಿ.ಕೆ. ಶ್ಯಾಮಲಾ, ಡಾ. ಜಿ. ಶಂಕರ್ ಮಹಿಳಾ ಸರಕಾರಿ ಪ್ರಥಮ ದರ್ಜೇ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಪ್ರೊ. ಸೋಜನ್ ಸಿ.ಕೆ. ಪ್ರಾಧ್ಯಾಪಕರಾದ ಡಾ. ನಿಕೇತನ, ಪ್ರೊ. ವಿದ್ಯಾ ಡಿ. ಅಖಿಲ ಭಾರತ ಕುಟುಂಬ ಕಲ್ಯಾಣ ಸಂಸ್ಥೆಯ ಜಿಲ್ಲಾಧ್ಯಕ್ಷ ಭಾಸ್ಕರ ಶೆಟ್ಟಿ ಉಪಸ್ಥಿತರಿದ್ದರು. ಜಿಲ್ಲಾ ರೆಡ್‌ಕ್ರಾಸ್ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಸ್ವಾಗತಿಸಿ ನಿರೂಪಸಿದರು. ರೆಡ್ ಕ್ರಾಸ್ ಖಜಾಂಚಿ ರಮಾದೇವಿ ವಂದಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು