ತುಳುಕೂಟ ಉಡುಪಿ (ರಿ) ಬೊಕ್ಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ಜಿಲ್ಲೆ ಮತ್ತು ದಿ। ನಿಟ್ಟೂರು ಸಂಜೀವ ಭಂಡಾರಿ ನೆನೆಪಿನ 30ನೇ ವರ್ಷದ "ತುಳು ಭಾವಗೀತೆ ಪಂಥೋ 2025" ಬಹುಮಾನ ವಿತರಣಾ ಸಮಾರಂಭ 30-11-2025 ಭಾನುವಾರ, ಮಧ್ಯಾಹ್ನ 12.00 ಘಂಟೆಗೆ , ಕ್ರಿಶ್ಚಿಯನ್ ಹೈಸ್ಕೂಲ್, ಉಡುಪಿ ಇಲ್ಲಿ ಜರಗಲಿದೆ.
ಅಧ್ಯಕ್ಷತೆಯನ್ನು ಭುವನ ಪ್ರಸಾದ್ ಹೆಗ್ಡೆ ನಿವೃತ್ತ ಬ್ಯಾಂಕ್ ಅಧಿಕಾರಿ, ಅತಿಥಿಗಳಾಗಿ ಡಾ. ರಶ್ಮಿ ಅಮ್ಮೆಂಬಳ ಸಂಯೋಜಕಿ ರೇಡಿಯೋ ಮಣಿಪಾಲ್, ಮಾಹೆ, ಹೆಲನ್ ವಿ. ಸಾಲಿನ್ಸ್ ಮುಖ್ಯೋಪಾಧ್ಯಾ ಯರು ಕ್ರಿಶ್ಚಿಯನ್ ಇಂಗ್ಲೀಷ್ ಮೀಡಿಯಂ ಶಾಲೆ, ಉಡುಪಿ, ದಿವಾಕರ ಸನಿಲ್, ಲಯನ್ಸ್ ಕ್ಲಬ್ ಉಡುಪಿ ಇಂದ್ರಾಳಿ, ಉದ್ಯಮಿ ದೀಪಕ್ ದಿವಾಕರ್ ಕಿಣಿ ಮಣಿಪಾಲ ಇವರೆಲ್ಲರೂ ಭಾಗವಹಿಸಲಿದ್ದಾರೆ ಎಂದು ತುಳು ಭಾವಗೀತೆ ಸ್ಪರ್ಧೆಯ ಸಂಚಾಲಕರಾದ ಜಯರಾಂ ಶೆಟ್ಟಿಗಾರ್ ಮಣಿಪಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

0 ಕಾಮೆಂಟ್‌ಗಳು