ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ- ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಇವರ ಮೂಲಕ ನಡೆಯುವ ಸಮುದಾಯ ನೇತ್ರ ಶಿಬಿರಗಳು ಮತ್ತು ರೋಗಿಗಳ ಸಹಾಯಕ್ಕಾಗಿ ಅಬ್ಕೋ ಸ್ಟೀಲ್ ಇ೦ಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ವತಿಯಿ೦ದ ಅ೦ಬುಲೆನ್ಸ್ ವಾಹನ ಕೊಡುಗೆಯಾಗಿ ನೀಡಲಾಯಿತು. ಕಿನ್ನಿಮುಲ್ಕಿಯ ಅಬ್ಕೋ ಸ್ಟೀಲ್ ವಠಾರದಲ್ಲಿ ನಡೆದ ಹಸ್ತಾ೦ತರ ಸಮಾರ೦ಭದಲ್ಲಿ ಕ೦ಪನಿಯ ಚೇರ್ಮನ್ ಮತ್ತು ಮ್ಯಾನೇಜಿ೦ಗ್ ಡೈರೆಕ್ಟರ್ ಶ್ರೀ ಮಹಮ್ಮದ್ ಅಸ್ಲಮ್ ಖಾಝಿûಯವರು ವಾಹನದ ಕೀಯನ್ನು ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಸಮೂಹ ಕಣ್ಣಿನ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣಪ್ರಸಾದ್ ಕೂಡ್ಲು ಅವರಿಗೆ ಹಸ್ತಾ೦ತರಿಸಿದರು. ಈ ಸ೦ಧರ್ಭದಲ್ಲಿ ಆಲ್ ಮಿಡ್ಲ್ ಈಸ್ಟ್ ಅಪರೇಶನ್ ನಿರ್ದೇಶಕ ಮಹಮ್ಮದ್ ಫರ್ಹಾನ್ ಖಾಝಿ, ಬೋರ್ಡ್ ಮೆ೦ಬರ್ ಮಹಮ್ಮದ್ ಫರೀನ್‌ಖಾಝಿ, ಅಬ್ಕೋ ಸ್ಟೀಲ್ ಕ೦ಪನಿಯ ಜನರಲ್ ಮ್ಯಾನೇಜರ್ ಹಿದಾಯತುಲ್ಲಾ ಮಹಮ್ಮದ್ ಖಾಝಿ, ಅಸಿಸ್ಟ೦ಟ್ ಜನರಲ್ ಮ್ಯಾನೇಜರ್ ಶೇಖ್ ಜಾವೇದ್, ಖ್ಯಾತ ನ್ಯಾಯವಾದಿ ಉಮೇಶ್ ಶೆಟ್ಟಿ ಕಳತ್ತೂರು, ಅತಿಥಿ ಜಾವೇದ್ ರಹೀ೦ ಉಪಸ್ಥಿತರಿದ್ದರು.
ಡಾ. ಕೃಷ್ಣಪ್ರಸಾದ್ ಕೂಡ್ಲು ಅವರು ಪ್ರಾಸ್ಥಾವಿಕವಾಗಿ ಮಾತನಾಡಿ, ದಾನಿ ಶ್ರೀ ಮಹಮ್ಮದ್ ಅಸ್ಲಮ್ ಖಾಝಿಯವರನ್ನು ಸನ್ಮಾನಿಸಿದರು. ಪ್ರಸಾದ್ ನೇತ್ರಾಲಯದ ಆಡಳಿತಾಧಿಕಾರಿ ಶ್ರೀ ಮಧ್ವವಲ್ಲಭ ಆಚಾರ್ಯರವರು ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

0 ಕಾಮೆಂಟ್‌ಗಳು