Header Ads Widget

ಮಲ್ಪೆ : ಅಕ್ರಮ ಬಾಂಗ್ಲಾ ವಲಸಿಗರಿಗೆ 2 ವರ್ಷ ಸಜೆ, 10 ಸಾವಿರ ದಂಡ!

ಕಳೆದ ವರ್ಷ ಮಲ್ಪೆ ವಡಭಾಂಡೇಶ್ವರ ಬಸ್‌ ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಅಕ್ರಮ ಬಾಂಗ್ಲಾ ವಲಸಿಗರನ್ನು ಪೊಲೀಸರು ಬಂಧಿಸಿದ್ದು, ಇದೀಗ ಅವರಿಗೆ ನ್ಯಾಯಾಲಯ ಎರಡು ವರ್ಷಗಳ ಸಜೆ ಮತ್ತು 10,000 ದಂಡ ವಿಧಿಸಿ ಆದೇಶ ನೀಡಿದೆ.

ಆರೋಪಿಗಳು ದೇಶದ ಯಾವುದೇ ಅನುಮತಿ ದಾಖಲೆಗಳನ್ನು ಪಡೆಯದೇ ಅಕ್ರಮವಾಗಿ ನಕಲಿ ಆಧಾರ್ ಕಾರ್ಡ್ ದಾಖಲೆಗಳನ್ನು ಸೃಷ್ಟಿಸಿ, ವಂಚಿಸುವ ಉದ್ದೇಶದಿಂದ ಸುಳ್ಳು ಸ್ಪಷ್ಟನೆಯನ್ನು ನೀಡಿ, ಬಾಂಗ್ಲಾದೇಶದಿಂದ ಉಡುಪಿ ತಾಲೂಕು ಪಡುತೋನ್ಸೆ ಗ್ರಾಮದ ಹೂಡೆಗೆ ಬಂದಿದ್ದರು. ಅವರನ್ನು ವಶಕ್ಕೆ ಪಡೆದು ಠಾಣೆಗೆ ನೀಡಿದ ದೂರಿನಂತೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಅವರ ವಿರುದ್ದ ಅಪರಾಧ ಕ್ರಮಾಂಕ : 138/2025 ಕಲಂ 336(2). 336(3), 340(2), 319(2), 318(4) 38 3(5) BNS 2 14(A) foreigners act, ಕಲಂ:34,42 ಆಧಾರ್ ಆಕ್ಟ್ ನಂತೆ ಪ್ರಕರಣ ದಾಖಲಾಗಿತ್ತು.

ಅಕ್ರಮವಾಗಿ ಉಡುಪಿಗೆ ಬಂದ ಆರೋಪಿಗಳಾದ1) ಹಕೀಮ್ ಆಲಿ, 2) ಸುಜೋನ್ ಎಸ್.ಕೆ @ ಫಾರೂಕ್ 3) ಇಸ್ಮಾಯಿಲ್ ಎಸ್.ಕೆ @ ಮಹಮದ್ ಇಸ್ಮಾಯಿಲ್ ಹಾಕ್ 4) ಕರೀಮ್ ಎಸ್.ಕೆ @ ಅಬ್ದುಲ್ ಕರೀಮ್ 5) ಸಲಾಂ ಎಸ್.ಕೆ @ ಎಮ್‌ಡಿ ಅಬ್ದುಲ್ ಅಜೀಜ್ 6) ರಾಜಿಕುಲ್ ಎಸ್.ಕೆ 7) ಮೊಹಮ್ಮದ್ ಸೋಜಿಬ್ @ ಎಮ್ ಡಿ ಅಲ್ಲಾಂ ಆಲಿ 8). ರಿಮೂಲ್ @ ಅಬ್ದುಲ್ ರೆಹಮಾನ್ 9). ಮೊಹಮ್ಮದ್ ಇಮಾಮ್ ಶೇಖ್, 10).ಮೊಹಮ್ಮದ್ ಜಹಾಂಗಿರ್ ಅಲಂ ಇವರ ವಿರುದ್ಧ Prl Sr Civil Judge & CJM ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಲಾಗಿತ್ತು.

ಪ್ರಕರಣದಲ್ಲಿ ವಿಚಾರಣೆ ನಡೆದು ನ್ಯಾಯಾಲಯವು ದಿನಾಂಕ: 08/12/2025 ರಂದು 10 ಮಂದಿ ಆರೋಪಿಗಳಿಗೆ 2 ವರ್ಷಗಳ ಕಾಲ ಸಜೆ ಮತ್ತು ತಲಾ 10,000/- ರೂ. ದಂಡವನ್ನು ವಿಧಿಸಿ ಆದೇಶಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು