ಜೀವನಾನುಭವದಿಂದ ಸಾಹಿತ್ಯದೆಡೆಗೆ ಉಪನ್ಯಾಸ

ಮಣಿಪಾಲ : ನಮ್ಮ ಸುತ್ತ ಇರುವ ಹಾವುಗಳ ಬಗ್ಗೆ ತುಂಬಾ ತಪ್ಪುಕಲ್ಪನೆಗಳಿವೆ. ಎಲ್ಲಾ ಹಾವುಗಳು ವಿಷಕಾರಿಗಳು ಅಲ್ಲ. ವಿಷಕಾರಿ ಹಾವುಗಳು ಕೂಡ ನಮ್ಮಿಂದ ನೋವಿಗೊಳಗಾಗದೆ ನಮಗೆ ಹಾನಿ ಮಾಡುವುದಿಲ್ಲ. ಹಾವುಗಳು ಮುಗ್ಧ ಜೀವಿಗಳು ಅವುಗಳನ್ನು ನಾವು ಕಕ್ಷಿ ಸಬೇಕಾಗಿದೆ ಎಂದು ಉರಗ ತಜ್ಞ ಗುರುರಾಜ್ ಸನಿಲ್. 

ರವಿವಾರ ಶಿವಪ್ರೇರಣ ಚಾರಿಟೇಬಲ್ ಟ್ರಸ್ಟ್ ಇದರ ಆಶ್ರಯದಲ್ಲಿ ಶಿವಪ್ರೇರಣ ಸಾಹಿತ್ಯ ಬಳಗದ ವತಿಯಿಂದ ರತ್ನ ಸಂಜೀವ ಕಲಾ ಮಂಡಲದಲ್ಲಿ ನಡೆದ ಜೀವನಾನುಭವದಿಂದ ಸಾಹಿತ್ಯದೆಡೆಗೆ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಉಪನ್ಯಾಸವನ್ನು ನೀಡಿದರು.

ಹಾವುಗಳ ವಿಷಯದಲ್ಲಿ ಬರುವ ಸಂಗತಿಗಳನ್ನು ಯಾವುದೇ ಪ್ರಶ್ನೆ ಮಾಡದೇ ಒಪ್ಪಿಕೊಂಡರೆ ಅದೇ ದೊಡ್ಡ ಮೂಡನಂಬಿಕೆ ಯಾಗುತ್ತದೆ. ತಮ್ಮ ಅನುಭವವೇ ಕ್ರೂಢಿಕರಣಗೊಂಡು ಲೇಖನಗಳಾಗಿ, ಕಾದಂಬರಿಗಳಾಗಿ ರುಪುಗೊಂಡಿದೆ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಿವಪ್ರೇರಣ ಸಾಹಿತ್ಯ ಬಳಗದ ಅಧ್ಯಕ್ಷ ನಿತ್ಯಾನಂದ ಪಡ್ರೆಯವರು ವಹಿಸಿದ್ದರು. ಈ ಸಂದರ್ಭದಲ್ಲಿ ಶಿವಪ್ರೇರಣ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ರಮಾನಂದ ಸಾಮಂತ್, ಶಿವಪ್ರೇರಣ ಸಾಹಿತ್ಯ ಬಳಗದ ಕಾರ್ಯದರ್ಶಿ ಚೇತನಾ ಗಣೇಶ್, ಕೋಶಧಿಕಾರಿ ಸುಮಾಕಿರಣ್ ಉಪಸ್ಥಿತರಿದ್ದರು. ವೈಷ್ಣವಿ ಪ್ರಾರ್ಥಿಸಿ, ಮಹೇಶ್ ನಾಯ್ಕ್ ಸ್ವಾಗತಿಸಿ, ದೀಪಿಕಾ ಮಣಿಪಾಲ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು