ಉಡುಪಿ ಕೊಚ್ಚಿನ್ ಶಿಪ್ಯಾರ್ಡ್, ಮಲ್ಪೆ ಸಂಸ್ಥೆಯಿಂದ M/S Shushma Marine Private Limited ಎಂಬ ಸಂಸ್ಥೆಯ ಸಬ್‌ಕಂಟ್ರಾಕ್ಟ ಹೊಂದಿದ್ದು, ಈ ಸಂಸ್ಥೆಯಲ್ಲಿ ಉತ್ತರಪ್ರದೇಶ ರಾಜ್ಯದ ಮೂಲದ ರೋಹಿತ್ ಮತ್ತು ಸಂತ್ರಿ ಎಂಬಾತನು ಭಾರತದ ನೌಕಾ ಸೇನೆಗೆ ಸಂಬಂಧಪಟ್ಟ ಹಡಗುಗಳ ನಂಬ್ರಗಳ ಗೌಪ್ಯ ಪಟ್ಟಿ, ಇತರ ಗೌಪ್ಯ ಮಾಹಿತಿಯನ್ನು ವಾಟ್ಸಪ್ ಮೂಲಕ ಅನಧಿಕೃತವಾಗಿ ಶೇರ್ ಮಾಡಿ, ಅಕ್ರಮ ಲಾಭ ಪಡೆದಿರುವ ಬಗ್ಗೆ ಈಗಾಗಲೇ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 128/2025, ಕಲಂ:152 BNS, ಕಲಂ:3,5 OFFICIAL SECRETS ACT, 1923ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಈ ಪ್ರಕರಣದ ತನಿಖಾಧಿಕಾರಿ ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಹರ್ಷ ಪ್ರಿಯಂವದಾ ಐಪಿಎಸ್ ರವರ ನೇತೃತ್ವದ ತಂಡ ಆರೋಪಿಗಳಾದ 1) ರೋಹಿತ್ ಮತ್ತು 2) ಸಂತ್ರಿ(ಉತ್ತರ ಪ್ರದೇಶ ರವರನ್ನು ದಸ್ತಗಿರಿ ಮಾಡಿದ್ದು, ಆರೋಪಿಗಳು ನ್ಯಾಯಾಂಗ ಬಂದನದಲ್ಲಿರುತ್ತಾರೆ.
ಈ ಪ್ರಕರಣದ ತನಿಖೆ ಮಂದುವರಿಸಿದ ತನಿಖಾ ತಂಡ ಆರೋಪಿಗೆ ಮೊಬೈಲ್ ಸಿಮ್ ಒದಗಿಸಿದ ಆಧಾರದ ಮೇಲೆ ಆರೋಪಿ ಹೀರೇಂದ್ರ ಕುಮಾರ್ ಭರತ್ ಕುಮಾರ್ ಖಡಯಾತ(34), ಕೈಲಾಸ್ ನಗರಿ, ಆನಂದ ತಾಲೂಕು ಗುಜರಾತ್ ಎಂಬಾತನನ್ನು ದಿನ ದಿನಾಂಕ 21/12/2025ರಂದು ದಸ್ತಗಿರಿ ಮಾಡಲಾಗಿದೆ.
ಈ ಆರೋಪಿಯು ಹಣಕ್ಕಾಗಿ ತನ್ನ ಹೆಸರಿನಲ್ಲಿ ಮೊಬೈಲ್ ಸಿಮ್ ತೆಗೆದು ಆರೋಪಿಗೆ ನೀಡಿರುತ್ತಾನೆ.
ಸದರಿ ಆರೋಪಿಯನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದ್ದು, ತನಿಖೆ ಮುಂದುವರಿದಿರುತ್ತದೆ.

0 ಕಾಮೆಂಟ್‌ಗಳು