Header Ads Widget

ಸಿದ್ದಾಪುರ : ನಕಲಿ ಚಿನ್ನ ನೀಡಿ ಪರಾರಿಯಾಗಿದ್ದ ಆರೋಪಿಯ ಬಂಧನ!

ಗೋಪಾಲ, ಗಣಮೂರು, ಚಂದ್ರಬಂಡ ಗ್ರಾಮ ಪಂಚಾಯತ್, ರಾಯಚೂರು ತಾಲೂಕು & ಜಿಲ್ಲೆ ಎಂಬವರಿಗೆ ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ತಿಳಿಸಿದ ದಿನಾಂಕ: 16/12/2025ರ ಮದ್ಯಾಹ್ನ 1:00 ಗಂಟೆ ಸುಮಾರಿಗೆ ಠಾಣಾ ವ್ಯಾಪ್ತಿಯ ಸಿದ್ದಾಪುರ ಕಮಲಶಿಲೆ ರಸ್ತೆಯಲ್ಲಿ ಆರೋಪಿಗಳು ಗೋಪಾಲ ರವರಿಗೆ 150 ಗ್ರಾಂ ಚಿನ್ನವೆಂದು ಹೇಳಿ 5 ಲಕ್ಷ ಪಡೆದುಕೊಂಡು ನಕಲಿ ಚಿನ್ನ ನೀಡಿ ಪರಾರಿಯಾಗಿದ್ದ ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 94/2025 ಕಲಂ 316(2), 318(2) 3(5) BNS ಪ್ರಕರಣ ದಾಖಲಾಗಿರುತ್ತದೆ.

ಕುಂದಾಪುರ ಉಪ ವಿಭಾಗದ ಡಿ.ವೈ.ಎಸ್.ಪಿ. ಹೆಚ್.ಡಿ. ಕುಲಕರ್ಣಿ, ಸಂತೋಷ.ಎ. ಕಾಯ್ಕಿಣಿ. ಸಿ.ಪಿ.ಐ. ಕುಂದಾಪುರ, ರವರ ಮಾರ್ಗದರ್ಶನದಲ್ಲಿ ಕೃತ್ಯದಲ್ಲಿ ಭಾಗಿಯಾಗಿದ್ದವರ ಪೈಕಿ ಆರೋಪಿ ಜಯಪ್ರಕಾಸ್.ಡಿ., ಗಾಂಧಿನಗರ, ಚಳ್ಳಕೆರೆ,ಚಿತ್ರದುರ್ಗ ಜಿಲ್ಲೆ ಎಂಬಾತನನ್ನು ಚಿತ್ರದುರ್ಗದ ಕೋಟೆ ಪ್ರದೇಶದಲ್ಲಿ ವಶಕ್ಕೆ ಪಡೆದು, ಆತನಿಂದ 4,50,000/- ರೂ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಸುಮಾರು 10,00,000/- ರೂ ಮೌಲ್ಯದ ಕೆ.ಎ. 34 ಪಿ. 8813 ನೇ ಕಾರನ್ನು (ಒಟ್ಟು ಮೌಲ್ಯ ಸುಮಾರು 14,50,000/-) ವಶಪಡಿಸಿಕೊಂಡು, ಆರೋಪಿಯನ್ನು ದಸ್ತಗಿರಿ ಮಾಡಿ, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಈ ಪತ್ತೆ ಕಾರ್ಯದಲ್ಲಿ ಶಂಕರನಾರಾಯಣಾ ಠಾಣಾ ಪಿ.ಎಸ್.ಐ. ರವರುಗಳಾದ ಐ.ಆರ್. ಗಡ್ಡೇಕರ್, ಪಿ.ಎಸ್.ಐ.(ಕಾ.ಸು), ಶಂಭುಲಿಂಗಯ್ಯ ಎಮ್.ಇ. ಪಿ.ಎಸ್.ಐ. (ತನಿಖೆ) ಸಿಬ್ಬಂದಿಗಳಾದ ಹೆಚ್.ಸಿ. ಪುನೀತ್ ಕುಮಾರ್ ಶೆಟ್ಟಿ, ಹೆಚ್.ಸಿ ಅಶೋಕ್, ಪಿ.ಸಿ. ಜಯರಾಮ ನಾಯ್ಕ್, ಪಿ.ಸಿ. ಮೌನೇಶ್, ಪಿ.ಸಿ ನವೀನ್ ಕುಮಾರ್, ಪಿ.ಸಿ ಅಜಿತ್ ಕುಮಾರ್, ಪಿ.ಸಿ. ಹಾಲಪ್ಪ, ಪಿ.ಸಿ. ಸತೀಶ್ ಪೂಜಾರಿ ರವರುಗಳು ಭಾಗಿಯಾಗಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು