Header Ads Widget

ಮರವಂತೆ : ಭಾವಸುಧಾ ದೋಣಿಯಾನ - ವಿನೂತನ ಕಾರ್ಯಕ್ರಮ

ದಿನಾಂಕ 6 :12:2025 ರ ಶನಿವಾರ ರಾತ್ರಿ 7:30 ರಿಂದ 10 ಗಂಟೆ ತನಕ ಕನ್ನಡ ಸಾಹಿತ್ಯ ಪರಿಷತ್ತು ಬೈಂದೂರು ಘಟಕ ಇವರ ಸಹಯೋಗದಲ್ಲಿ ನಾವೆಯಲ್ಲೊಂದು ಕನ್ನಡ ಭಾವ ಸಂವಾದ 'ಭಾವ ಸುಧಾ' ದೋಣಿಯಾನ ಕಾರ್ಯಕ್ರಮವು ಮರವಂತೆ ಮಹಾರಾಜ ಸ್ವಾಮಿ ದೇಗುಲದ ಬಳಿಯ ಸೌಪರ್ಣಿಕಾ ನದಿಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕವನ ವಾಚನ ಮೂಲಕ ಶ್ರೀ ಅರುಣ್ ಕುಮಾರ್ ಶಿರೂರು ಅಧ್ಯಕ್ಷರು,ಕನ್ನಡ ಸಾಹಿತ್ಯ ಪರಿಷತ್ ಬೈಂದೂರು ಘಟಕ ಇವರು ವಹಿಸಿದ್ದರು. ಸೌಪರ್ಣಿಕಾ ಆರತಿ ಮತ್ತು ಕವನ ವಾಚನದ ಮೂಲಕ ಉದ್ಘಾಟನೆಯನ್ನು ಹಿರಿಯ ಸಾಹಿತಿ ಶ್ರೀ ಪುಂಡಲಿಕ ನಾಯಕ್ ನಾಯ್ಕನಕಟ್ಟೆ ಇವರು ನೆರವೇರಿಸಿದರು. 'ಭಾವ ಸುಧಾ' ದೋಣಿಯಾನದಲ್ಲಿ ಕವನ ವಾಚನ ಗೈದವರು ಮಹಾಬಲ.ಕೆ - ಮರವಂತೆ, ಮಂಜುನಾಥ ದೇವಾಡಿಗ ಮೊಗೆರಿ,ಮಂಜುನಾಥ ಮರವಂತೆ, ದಿನೇಶ್ ಆಚಾರ್ಯ ಚೇಂಪಿ, ಮಂಜುನಾಥ ಗುಂಡ್ಮಿ, ಜಗದೀಶ ಉಪ್ಪುಂದ,ರಮೇಶ ನಾಯ್ಕ ಉಪ್ಪುಂದ, ದೀಕ್ಷಿತ್. ಆರ್ ನಾಯ್ಕ ಉಪ್ಪುಂದ ಭಾಗವಹಿಸಿದರು.ಆರಂಭದಲ್ಲಿ ಮಹಾಬಲ ಕೆ ಮರವಂತೆ ಪ್ರಾರ್ಥಿಸಿದರು.ಕಸಾಪದ ಬೈಂದೂರು ತಾಲೂಕಿನ ಕಾರ್ಯದರ್ಶಿ ಮಂಜುನಾಥ ದೇವಾಡಿಗ ಮೊಗೇರಿಯವರು ಸ್ವಾಗತಿಸಿ, ಸಂಯೋಜಕರಾದ ದಿನೇಶ ಚೇಂಪಿಯವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಮೇಶ ನಾಯ್ಕ ಉಪ್ಪುಂದ ನಿರೂಪಿಸಿದರು.ಕೊನೆಯಲ್ಲಿ ಸಂಯೋಜಕರಾದ ಮಂಜುನಾಥ ಮರವಂತೆ ವಂದಿಸಿದರು. ಲಘು ಉಪಹಾರದ ವ್ಯವಸ್ಥೆಯೂ ಇತ್ತು. ಕಸಾಪ ಅಧ್ಯಕ್ಷರಿಂದ ಭಾಗವಹಿಸಿದ ಸರ್ವರಿಗೂ ಅಭಿನಂದನ ಪತ್ರ ಮತ್ತು ಪುಸ್ತಕ ಸ್ಮರಣಿಕೆ ಕೊಟ್ಟು ಗೌರವಿಸಲಾಯಿತು. ದೋಣಿಯ ಪಯಣದ ಸಾರಥ್ಯವನ್ನ ಶ್ರೀ "ವರಾಹ ಬೋಟ್ ರೈಡರ್" ದೋಣಿ ಮಾಲಿಕರಾದ ಶ್ರೀ ರಾಜು ಪೂಜಾರಿ ಕುರು ಇವರು ವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು