Header Ads Widget

ಶೀರೂರು ಪರ್ಯಾಯ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬ್ರಹತ್ ಹೊರೆಕಾಣಿಕೆ

ಉಡುಪಿ : ಶ್ರೀ ಕೃಷ್ಣ ಮಠದ ಮುಂದಿನ ಶ್ರೀ ಶೀರೂರ್ ಮಠದ ಪರ್ಯಾಯೋತ್ಸವಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಭಿವೃದ್ಧಿ ಯೋಜನೆಯ ನೇತ್ರತ್ವದಲ್ಲಿ ಅದ್ದೂರಿಯಾಗಿ ಬ್ರಹತ್ ಹೊರೆಕಾಣಿಕೆ ಸಮರ್ಪಣೆಯಾಗಬೇಕೆಂದು ಪರ್ಯಾಯ ಸ್ವಾಗತ ಸಮಿತಿಯ ಸಂಚಾಲಕರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ ಮನವಿ ಮಾಡಿದರು. 

ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಪ್ರಾದೇಶಿಕ ಕಾರ್ಯಾಲಯದಲ್ಲಿ ನಡೆದ ಯೋಜನೆಯ ಒಕ್ಕೂಟಗಳ ಪ್ರಮುಖರ ಸಭೆಯಲ್ಲಿ ಮಾತನಾಡುತ ಶ್ರೀ ಕೃಷ್ಣ ಮಠ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅನ್ಯೋನ್ಯ ಸಂಬಂಧ ಇದ್ದು ಪರಂಪರಾಗತವಾಗಿ ಹೊರೆಕಾಣಿಕೆ ಸಮಾರ್ಪಿತವಾಗುತಿದ್ದು ಈ ಬಾರಿ ವ್ಯಾಪಾಕವಾಗಿ ಸಂಪರ್ಕಿಸಿ ಬ್ರಹತ್ ಹೊರೆಕಾಣಿಕೆ ಸಮರ್ಪಸಿ ಪುಣ್ಯ ಸಂಚಾಯಿಸಿಕೊಳ್ಳಬೇಕೆಂದು ಕರೆ ನೀಡಿದರು. ಈ ಸಭೆಯಲ್ಲಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣರು ಮಾತನಾಡಿ ಜಿಲ್ಲೆಯ ಪ್ರತಿ ಒಕ್ಕೂಟಗಳಿಂದ ಹೊರೆಕಾಣಿಕೆ ಸಮರ್ಪಣೆಮಾಡುವ ಬಗ್ಗೆ ತಯಾರಿಯನ್ನನಡೆಸಲಿದ್ದೆವೆ ಹಾಗೂ ಯೋಜನೆಯ ಪೂರ್ಣ ಕಾರ್ಯಕರ್ತರು ಈ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು. ಪರ್ಯಾಯ ಸಮಿತಿಯಕಾರ್ಯದರ್ಶಿ ಮೋಹನ್ ಭಟ್ ಸಹಕಾರವನ್ನು ಯಾಚಿಸಿದರು. ಯೋಜನೆಯ ಜಿಲ್ಲಾನಿರ್ದೇಶಕರಾದ ನಾಗರಾಜ್ ಶೆಟ್ಟಿ ಮಾತನಾಡಿ ಇಡೀಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಸಂಪರ್ಕಿಸಿ ಹೊರೆಕಾಣಿಕೆ ಸಂಗ್ರಹಿಸುವ ಕಾರ್ಯ ಪ್ರಾಮಾಣಿಕವಾಗಿ ಮಾಡಲಿದ್ದೇವೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.  ಈ ಸಭೆಯಲ್ಲಿ ನಗರಸಭೆಯ ಮಾಜಿ ಸದಸ್ಯರಾದ ಸುಂದರ್ ಕಲ್ಮಾಡಿ, ಪರ್ಯಾಯ ಸಮಿತಿಯ ನಂದನ್ ಜೈನ್, ವಿಷ್ಣುಮೂರ್ತಿ ಆಚಾರ್ಯ, ವಿಷ್ಣುಪ್ರಸಾದ್ ಪಾಡಿಗಾರ್, ಒಕ್ಕೂಟದ ಪ್ರಮುಖರಾದ ರಾಘವೇಂದ್ರ ಶೆಟ್ಟಿ ಉಪಸ್ಥಿತರಿದ್ದರು ಯೋಜನೆಯ ಮಮತಾ ಧನ್ಯವಾದ ಸಮಾರ್ಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು