ಪೂಜ್ಯ ಪುತ್ತಿಗೆ ಶ್ರೀಪಾದರ ವಿಶ್ವಗೀತಾ ಪರ್ಯಾಯದಲ್ಲಿ ಅನೇಕ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯುತ್ತಿದ್ದು ಇದೀಗ ಶಿಖರ ಪ್ರಾಯವೆಂಬಂತೆ, 30 ಡಿಸೆಂಬರ್ 2025 ದಶಮಿಯ ಶುಭದಿನದಂದು ಸಾಯಂಕಾಲ 5:00 ಗಂಟೆಗೆ ರಾಜಾಂಗಣದಲ್ಲಿ ಲೋಕಕಲ್ಯಾಣಾರ್ಥ ಶ್ರೀನಿವಾಸ ಕಲ್ಯಾಣ ಮಹೋತ್ಸವವನ್ನು ಪರ್ಯಾಯ ಪುತ್ತಿಗೆ ಶ್ರೀ ಕೃಷ್ಣ ಮಠದ ವತಿಯಿಂದ ಆಯೋಜಿಸಲಾಗಿದೆ.
ಶ್ರೀವಾರಿ ಫೌಂಡೇಶನ್ ನ ಶ್ರೀ ವೆಂಕಟೇಶ್ ಮೂರ್ತಿ ಅವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯುವ ಈ ಕಲ್ಯಾಣೋತ್ಸವದಲ್ಲಿ ತಿರುಪತಿ- ತಿರುಮಲದಿಂದ ಬಂದ ಲಡ್ಡು ಮತ್ತು ಮಂತ್ರಾಕ್ಷತೆ ಪ್ರಸಾದವನ್ನು ಭಕ್ತಾದಿಗಳಿಗೆ ವಿತರಿಸಲಾಗುವುದು.
ಸಾರ್ವಜನಿಕರು ಈ ಪುಣ್ಯ ಉತ್ಸವದಲ್ಲಿ ಭಾಗವಹಿಸಿ, ಶ್ರೀ ಭೂ ಸಹಿತ ಶ್ರೀನಿವಾಸ ದೇವರ ಪರಮಾ ನುಗ್ರಹಕ್ಕೆ ಪಾತ್ರರಾಗುವಂತೆ ಶ್ರೀಮಠದ ಪ್ರಕಟಣೆ ತಿಳಿಸಿದೆ.

0 ಕಾಮೆಂಟ್‌ಗಳು