
ಅವರು ಶನಿವಾರ ಮಲ್ಪೆಯಲ್ಲಿ ಅಂಬೇಡ್ಕರ್ ಯುವಸೇನೆ ಆಯೋಜಿಸಿದ ಡಾ,ಬಾಬಾ ಸಾಹೇಬ ಅಂಬೇಡ್ಕರ್‌ರವರ 69ನೇ ಪರಿನಿಬ್ಬಾಣದ ಪ್ರಯುಕ್ತ ಅಂಬೇಡ್ಕರ್ ಕಡೆಗೆ ನಮ್ಮ ನಡಿಗೆ ಕ್ಯಾಂಡಲ್ ಮೆರವಣಿಗೆಯ ಸಮಾರೋಪದಲ್ಲಿ ಮಾತನಾಡುತ್ತಾ, ನಮಗೆ ಸಂವಿಧಾನ ಇದೆ, ಅಧಿಕಾರ ಇಲ್ಲ. ಕಾನೂನು ಇದೆ, ನ್ಯಾಯ ಇಲ್ಲ. ಗುರಿ ಇದೆ, ದಾರಿ ಇಲ್ಲ. ಒಂದೇ ಕುಲದವರು ಇದ್ದೇವೆ ಆದರೆ ಒಟ್ಟಿಗೆ ಹೆಜ್ಜೆ ಹಾಕಲ್ಲ. ಎಕೆಂದರೆ ನಮ್ಮಲ್ಲಿ ಆಡಂಬರ ಇದೆ. ಅಂಬೇಡ್ಕರ್ ಇಲ್ಲ. ಎಲ್ಲಿಯವರೆಗೆ ನಾವು ಅಂಬೇಡ್ಕರ್ ವಿಚಾರಧರೆಯನ್ನು ಮೈತುಂಬಿಸಿಕೊ0ಡರೆ ಮಾತ್ರ ಈ ದೇಶದ ಅಧಿಕಾರ ನಮ್ಮದಾಗುತ್ತದೆ ಎಂದರು.
ಕಾರಂತ ಟ್ರಸ್ಟ್ನ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಮಾತನಾಡಿ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದಿಂದ ಅಸಮಾನತೆ ಹೆಚ್ಚಾಗಿದ್ದು, ಶಿಕಣವನ್ನು ಇಂದು ವ್ಯಾಪಾರೀಕರಣ ಮಾಡ ಲಾಗುತ್ತಿದೆ. ಜೊತೆಗೆ ಶಿಕಣದ ಹಕ್ಕನ್ನು ಕಸಿದುಕೊಂಡು ಸರಕಾರಿ ಶಾಲೆಯನ್ನು ಮುಚ್ಚುವ ಹಂತಕ್ಕೆ ಬಂದಿದ್ದಾರೆ, ಅ0ಬೇಡ್ಕರ್‌ರವರ ಚಿಂತನೆಯನ್ನು ಮೈಗೂಡಿಸಿ ಹೋರಾಡದಿದ್ದರೆ ದಲಿತರು, ಹಿಂದುಳಿದ ವರ್ಗದವರು ಮತ್ತು ಅಲ್ಪಸಂಖ್ಯಾತರು ಮುಖ್ಯವಾಹಿನಿಗೆ ಬರಲಾರರು ಎಂದರು.
ದಲಿತ ಹಕ್ಕುಗಳ ಹೋರಾಟ ಸಮಿತಿಯ ಉಡುಪಿ ಜಿಲ್ಲಾಧ್ಯಕ್ಷ ಸಂಜೀವ ಬಳ್ಕೂರು ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರಕಾರ ದಲಿತರಿಗೆ ಮೀಸಲಾತಿಯಲ್ಲಿ ಅನ್ಯಾಯಮಾಡುತ್ತಿದೆ. ದಲಿತ ಚಳುವಳಿ ಖಾಸಾಗಿ ಕ್ಷೇತ್ರದಲ್ಲಿ ಮೀಸಲಾತಿಗಾಗಿ ಹೋರಾಟನಡೆಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ,ರಮೇಶ್ ಕಾಂಚನ್,ಮಹಾಬಲ ಕುಂದರ್,ಸತೀಶ್ ನಾಯ್ಕ,ರಮೇಶ್ ತಿಂಗಳಾಯ, ವೆ0ಕಟೇಶ್ ಕುಲಾಲ್, ಮಂಜುನಾಥ, ಶರತ್ ಶೆಟ್ಟಿ, ಮೀನಾಕ್ಷಿ ಮಾಧವ, ಉಷಾ, ಸತೀಶ್ ಮಂಚಿ,ಮಾಧವ ಬನ್ನಂಜೆ ,ಸತೀಶ್ ಕೊಡವೂರು, ಸುಧಾರ್ಶನ್ ಪಡುಕರೆ, ಯಾದವ ಅಮೀನ್ ಕೊಳ, ಹರೀಶ್ ಸಲ್ಯಾನ್, ಸಂತೋಷ್ ಕಪ್ಪೆಟ್ಟು, ರವಿರಾಜ್ ಲಕ್ಮೀನಗರ, ದಯಾಕರ ಮಲ್ಪೆ, ಸಾಧು ಚಿಟ್ಪಾಡಿ, ಕೃಷ್ಣಶ್ರೀಯಾನ್, ಸುಮಿತ್ ನೆರ್ಗಿ, ಗುಣವಂತ ತೋಟ್ಟಂ, ಭಗವಾನ್, ವಿನಯ ಬಲರಾಮನಗರ, ಸತೀಸ್ ಕಪ್ಪೆಟ್ಟು, ದೀಪಕ್, ಸಂದ್ಯಾಕೃಷ್ಣ, ಪೂರ್ಣಿಮ ಸಂದ್ಯಾತಿಲಕ್, ಪ್ರಮೀಳ, ಶಶಿಕಲಾ ತೊಟ್ಟಂ, ವಿನಯ ಕೊಡಂಕೂರು, ವಿನೋದ ಮುಂತಾದವರು ಭಾಗವಹಿಸಿದ್ದರು.
0 ಕಾಮೆಂಟ್‌ಗಳು