ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ| ಎಂ. ಎನ್. ರಾಜೇಂದ್ರ ಕುಮಾರ್ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಇವತ್ತು ವಾಣಿಜ್ಯ ಬ್ಯಾಂಕುಗಳ ತವರೂರು ಎನ್ನಲಾಗುತ್ತಿದೆ. ಆದರೆ ಅವರಿಗಿಂತಲೂ ಅತ್ಯುತ್ತಮ ಸೇವೆಯನ್ನು ಸಹಕಾರಿ ಸಂಘಗಳು ನೀಡುತ್ತಿದೆ. ನಾರಾಯಣ ಬಲ್ಲಾಳ್ ಅವರು ಸಹಕಾರ ಸಂಘಕ್ಕೆ ವಿಶೇಷವಾದ ಕೊಡುಗೆಗಳನ್ನು ನೀಡಿದ್ದಾರೆ. ಸಹಕಾರ ಕ್ಷೇತ್ರ ಯಾವುದೇ ರಾಜಕೀಯದ ಸೋಂಕು ಇಲ್ಲದೇ ನಡೆಯುತ್ತಿದೆ. ಗ್ರಾಮ ಗ್ರಾಮಗಳಲ್ಲೂ ಸೇವೆ ನೀಡುತ್ತಿದೆ.ಸಹಕಾರ ಸಂಘಕ್ಕೆ ಕೊಡವೂರು ಸಂಘದ ಕೊಡುಗೆ ಸಾಕಷ್ಟಿದೆ ಎಂದರು.
ಆಡಳಿತ ಮಂಡಳಿ ಸಭಾಂಗಣವನ್ನು ವಿಧಾನಸಭಾ ಸಭಾಧ್ಯಕ್ಷ ಯು.ಟಿ. ಖಾದರ್ ಉದ್ಘಾಟಿಸಿ ಮಾತನಾಡಿ, ಸಹಕಾರಿ ಕ್ಷೇತ್ರಕ್ಕೆ ಕೊಡವೂರು ಸೊಸೈಟಿ ಅದ್ಬುತ ಕೊಡುಗೆಯನ್ನು ನೀಡಿದೆ. ಐತಿಹಾಸಿಕ ಮತ್ತು ದಾಖಲೆ ಡೆಪಾಸಿಟ್ ನ್ನು ಮಾಡಿ ಕೊಡವೂರು ಸೇವಾ ಸಹಕಾರಿ ಸಂಘ ಮಾದರಿಯಾಗಿದೆ.ಸಮಾಜವು ಪರಸ್ಪರವಾಗಿ ಕೈಜೋಡಿಸಿದಾಗ ದೇಶ ಬಲಿಷ್ಠವಾಗುತ್ತದೆ. ಅದಕ್ಕೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರ ಎಂದರು.
ಸ0ಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಮುಂದೆ ಎಲ್ಲಾ ಕ್ಷೇತ್ರಗಳನ್ನು ಸಹಕಾರಿ ವ್ಯಾಪ್ತಿಯೆಡೆಗೆ ತರುವ ಯೋಚನೆ ಕೇಂದ್ರ ಸರ್ಕಾರಕ್ಕೆ ಇದೆ.ಕೊಡವೂರು ಸೇವಾ ಸಹಕಾರಿ ಸಂಘ ಕಳೆದ 52 ವರ್ಷಗಳಿಂದ ಸಹಕಾರಿ ಕ್ಷೇತ್ರಕ್ಕೆ ದೊಡ್ಡ ಮಟ್ಟದ ಕೊಡುಗೆ ನೀಡಿ ಸಹಕಾರಿ ಕ್ಷೇತ್ರದ ಯಶಸ್ಸಿಗೆ ಕಾರಣವಾಗಿದೆ. ಇದು ಸಣ್ಣ ವಿಷಯವಲ್ಲ. ಜನರ ವಿಶ್ವಾಸ ಪ್ರೀತಿಯನ್ನು ಕಾಯ್ದುಕೊಳ್ಳುವುದು ದೊಡ್ಡ ಮಟ್ಟದ ಸಾಧನೆ ಎಂದು ಶ್ಲಾಘಿಸಿದರು. ಶಾಸಕ ಯಶ್‌ಪಾಲ್ ಎ. ಸುವರ್ಣ ಮಾತನಾಡಿ ಸಹಕಾರಿ ಸಂಘಕ್ಕೆ ಶುಭ ಹಾರೈಸಿದರು.
ಸಂಘದ ಅಧ್ಯಕ್ಷರಾದ ಕೆ. ನಾರಾಯಣ ಬಲ್ಲಾಳ್ ಅವರು ಮಾತನಾಡಿ, ಸಂಘದ ಅಧ್ಯಕ್ಷನಾಗಿ ಇಷ್ಟು ವರ್ಷಗಳ ಕಾಲ ಸಾರ್ಥದ ಸೇವೆ ಸಲ್ಲಿಸಿದ್ದೇನೆ.ಈ ಅವಧಿದಲ್ಲಿ ನೂರಾರು ಸಿಬಂಧಿಗಳು ಸಹಕಾರ ನೀಡಿದ್ದಾರೆ.ನಮ್ಮ ಸಂಘವು ಹಲವಾರು ಹೊಸ ಯೋಜನೆಗಳನ್ನು ಜನತೆಗೆ ನೀಡಿದೆ. ಸಮಾಜಮುಖಿಯಾದ ಕೆಲಸ ಮಾಡಿದ್ದೇವೆ. ನಿವೃತ್ತ ಸಿಬಂಧಿಗಳಿಗೆ ಆರೋಗ್ಯವಿಮೆ,ಪಿಂಚಣಿ ವ್ಯವಸ್ಥೆಗಳನ್ನು ಜಾರಿಗೊಳಿಸಿದ್ದೇವೆ ಎಂದರು ಎಲ್ಲರ ಸಹಕಾರವನ್ನೂ ನೆನೆದರು.
ಬೆಳಪು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಭದ್ರತಾ ಕೊಠಡಿ, ಮಾಜಿ ಸಂಸದ ಕೆ ಜಯಪ್ರಕಾಶ್ ಹೆಗ್ಡೆ ಗ್ರಾಹಕರ ಭದ್ರತಾ ಕೋಶ, ಮಾಜಿ ಶಾಸಕ ಕೆ ರಘುಪತಿ ಭಟ್ ಕಂಪ್ಯೂಟರ್, ಉಡುಪಿ ತಾಲೂಕು ವ್ಯವಸಾಯ – ಉತ್ಪನ್ನ ಮಾರಾಟ ಸಂಘದ ಅಧ್ಯಕ್ಷ ಬಿ. ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ ಲಿಫ್ಟ್, ಪುತ್ತೂರು ಸರಸ್ವತಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ ನವೋದಯ ಪ್ರೇರಕರ ಕಚೇರಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಿನಿ ಸಭಾಂಗಣ, ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ನಿರ್ದೇಶಕಿ ಪ್ರೊ. ಡಾ. ನಿರ್ಮಲಾ ಕುಮಾರಿ ಕಡತಗಳ ಕೊಠಡಿ, ಆಹಾರ ತಾಲೂಕು ಕಛೇರಿಯ ಉಪ ತಹಶೀಲ್ದಾರ್ ಆಶಾ ಕೆ. ಪಡಿತರ ಗೋದಾಮನ್ನು ಉದ್ಘಾಟಿಸಲಿದ್ದಾರೆ.
ದ.ಕ. ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಕೊಡವೂರು, ದ.ಕ. ಜಿಲ್ಲಾ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾದ ಅಶೋಕ್ ಕುಮಾರ್ ಶೆಟ್ಟಿ ಬೆಳ್ಳಂಪಳ್ಳಿ, ರಾಜೇಶ್ ರಾವ್ ಪಾಂಗಾಳ, ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕಿ ಲಾವಣ್ಯ ಕೆ. ಆರ್., ಕುಂದಾಪುರ ಸಹಕಾರ ಸಂಘಗಳ ಸಹಾಯಕ ನಿಬಂಧಕ ಸುಧೀರ್ ಕುಮಾರ್, ಸಂಘದ ಉಪಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ| ಎಂ. ಎನ್. ರಾಜೇಂದ್ರ ಕುಮಾರ್, ವಿಧಾನಸಭಾ ಸಭಾಧ್ಯಕ್ಷ ಯು.ಟಿ. ಖಾದರ್ ಹಾಗೂ ಇನ್ನಿತರ ಗಣ್ಯ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು. ಸೊಸೈಟಿಯ ಕಟ್ಟಡ ನಿರ್ಮಾಣ ಹಾಗೂ ಅಭಿವೃದ್ಧಿಗೆ ಶ್ರಮಿಸಿದ, ಸಹಕರಿಸಿದ ಎಲ್ಲರನ್ನು ಸನ್ಮಾನಿಸಿದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುಧಾಕರ್ ಜತ್ತನ್ ಯೋಜನೆಗಳ ಮಾಹಿತಿಯನ್ನು ಸಭೆಗೆ ನೀಡಿದರು. ಕೊಡವೂರು ಸೇವಾ ಸಹಕಾರಿ ಸಂಘದ ಅಶೋಕ್ ಕುಮಾರ್ ಕೊಡವೂರು ವಂದಿಸಿದರು. ಸತೀಶ್ ಶೆಟ್ಟಿ, ಯೋಗೀಶ್ ಚಂದ್ರ ಅವರು ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸುಗಮ ಸಂಗೀತ, ಯಕ್ಷಗಾನ ಕಾರ್ಯಕ್ರಮಗಳು ನಡೆದವು.




0 ಕಾಮೆಂಟ್‌ಗಳು