ಉಡುಪಿ ನಗರದ ಎಂ.ಜಿಂ.ಎಂ ಪಿಯು ಕಾಲೇಜಿನ ವತಿಯಿಂದ ಡಿಸೆಂಬರ್ 11, 2025ರಂದು ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
'ಸೊಸೈಟಿ ಫಾರ್ ದ ಪ್ರೊಮೋಷನ್ಸ್ ಆಫ್ ಇಂಡಿಯನ್ ಕ್ಲಾಸಿಕಲ್ ಮ್ಯೂಸಿಕ್ ಆಂಡ್ ಕಲ್ಚರ್ ಅಮೊಂಗ್ಸ್ಟ್ ಯೂಥ್' (SPICMACAY) ಆಶ್ರಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ಒಡಿಸ್ಸಿ ನೃತ್ಯಗಾರ ಪಂಡಿತ ರಾಹುಲ್ ಆಚಾರ್ಯ ತಮ್ಮ ನೃತ್ಯ ಪ್ರದರ್ಶನ ನೀಡಲಿದ್ದಾರೆ. ‘ದಿ ಡಿವೈನ್ ಡ್ಯಾನ್ಸರ್’ ಎಂದೇ ಖ್ಯಾತರಾದ ಇವರು ತಮ್ಮ ನೃತ್ಯಕಲೆಯಿಂದ ಪ್ರೇಕ್ಷಕರ ಮನ ಸೆಳೆಯುತ್ತಾರೆ.
ಅವರೊಂದಿಗೆ ಸಹಕಲಾವಿದರಾಗಿ ಸಂಗೀತದಲ್ಲಿ ಸುಕಾಂತ ಕುಮಾರ್ ಕುಂಡ, ಮರ್ಧಲಾದಲ್ಲಿ ದಿಬಾಕರ್ ಪಾರಿದಾ, ವೈಲಿನ್‌ನಲ್ಲಿ ಪ್ರದೀಪ್ ಕುಮಾರ್ ಮಹಾರಣ ಮತ್ತು ಮಂಜೀರದಲ್ಲಿ ಸುಮುಖ ತಮಂಕರ ಸಹಕಾರ ನೀಡಲಿದ್ದಾರೆ.
ಈ ಸಾಂಸ್ಕೃತಿಕ ವೈಭವವು ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬೆಳಗ್ಗೆ 10.00ರಿಂದ ಮಧ್ಯಾಹ್ನ 12.00 ಗಂಟೆಯವರೆಗೆ ನಡೆಯಲಿದೆ. ಎಲ್ಲರಿಗೂ ಮುಕ್ತ ಪ್ರವೇಶವಿದ್ದು, ಕಾಲೇಜಿನ ಪ್ರಾಂಶುಪಾಲರು ಎಲ್ಲರನ್ನು ಸೌಹಾರ್ದಪೂರ್ವಕವಾಗಿ ಆಹ್ವಾನಿಸಿದ್ದಾರೆ.

0 ಕಾಮೆಂಟ್‌ಗಳು