Header Ads Widget

ಉಡುಪಿ : ವೆಂಕಟೇಶ್ ಪೈ ಬಗಲಿಗೆ "ವಿಕಾಸ ಮಾಧ್ಯಮ ಸಾಧಕ ಪ್ರಶಸ್ತಿ-2025"

 

ಬೆಂಗಳೂರಿನ ಸಮಾನ ಮನಸ್ಕ ಮಾಧ್ಯಮ ಮಿತ್ರರ ವೇದಿಕೆ(ರಿ) ಹಾಗೂ "ಸುಗುಣ ಮಾಲಾ" ಆಧ್ಯಾತ್ಮಿಕ ಮಾಸ ಪತ್ರಿಕೆ ಪುತ್ತಿಗೆ ಮಠ ಉಡುಪಿ ವತಿಯಿಂದ ಶನಿವಾರದಂದು ಉಡುಪಿಯ ಶ್ರೀಕೃಷ್ಣ ಮಠದ ಗೀತಾ ಮಂದಿರದ 5ನೇ ಮಹಡಿಯ ಪುತ್ತಿಗೆ ನರಸಿಂಹ ಸಭಾ ಭವನದಲ್ಲಿ ನಡೆದ "ಕರಾವಳಿ ವಿಕಾಸ ಸಂಭ್ರಮ -2025" ಕಾರ್ಯಕ್ರಮದಲ್ಲಿ ಸಂಜೆಪ್ರಭ ಪತ್ರಿಕೆಯ ಸಂಪಾದಕ ವೆಂಕಟೇಶ್ ಪೈ ಅವರಿಗೆ  "ಕೀರ್ತಿ ಶೇಷ" ಸಂತೋಷ್ ಕುಮಾರ್ ಗುಲ್ವಾಡಿ ಸ್ಮರಣಾರ್ಥ "ವಿಕಾಸ ಮಾಧ್ಯಮ ಸಾಧಕ ಪ್ರಶಸ್ತಿ-2025"ಅನ್ನು ನೀಡಿ ಗೌರವಿಸಿದರು. 


ಈ ಸಂದರ್ಭದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಪುತ್ತಿಗೆ ಮಠದ ಅಂತ ರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ, ವೀಣಾ ಬನ್ನಂಜೆ, ವಿಕಾಸದ ಅಧ್ಯಕ್ಷ  ಶ್ರೀನಾಥ್ ಜೋಶಿ, ಕಾರ್ಯದರ್ಶಿ ಹನುಮೇಶ್ ಯಾವಗಲ್ ಮುಂತಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು