ಪ್ರಕಾಶಕಿ, ಸಾಹಿತಿ ಆಶಾ ರಘು (47) ಅವರು ಮಲ್ಲೇಶ್ವರದ 9ನೇ ಕ್ರಾಸ್‌ನ ತಮ್ಮ ಮನೆಯಲ್ಲಿ ಶನಿವಾರ ನಿಧನರಾದರು. ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ಆಶಾ ಅವರಿಗೆ ಪುತ್ರಿ ಇದ್ದಾರೆ. ಎರಡು ವರ್ಷಗಳ ಹಿಂದೆ ಆಹಾರ ತಜ್ಞ, ಪತಿ ಕೆ.ಸಿ.ರಘು ಅವರು ಮೃತಪಟ್ಟಿದ್ದರು.
ಪತಿ ಮೃತರಾದ ಬಳಿಕ ಆಶಾ ಅವರು ಮಾನಸಿಕವಾಗಿ ನೊಂದಿದ್ದರು. ಮನೆಯ ಕೊಠಡಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು. ಬಾಗಿಲು ಒಡೆದು ರಕ್ಷಿಸುವಷ್ಟರಲ್ಲಿ ಅವರು ಮೃತಪಟ್ಟಿದ್ದರು ಎಂದು ಮೂಲಗಳು ಹೇಳಿವೆ.
ಮರಣೋತ್ತರ ಪರೀಕ್ಷಗೆ ಮೃತದೇಹವನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇಂದು ಸಂಜೆಯೇ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ಹೇಳಿವೆ.
ಕಾದಂಬರಿಕಾರ್ತಿಯಾಗಿ, ಕಿರುತೆರೆ ನಟಿಯಾಗಿ ಗುರುತಿಸಿಕೊಂಡಿದ್ದರು. ಸಂಭಾಷಣೆಕಾರ್ತಿಯಾಗಿ, ಸಹಾಯಕ ನಿರ್ದೇಶಕಿಯಾಗಿ ಆಶಾ ರಘು ಕೆಲಸ ಮಾಡಿದ್ದರು.

0 ಕಾಮೆಂಟ್‌ಗಳು