ದಿನಾಂಕ : 10-01-2026 ಬೆಳಿಗ್ಗೆ 10.30ಕ್ಕೆ ಡಾ ಎ ವಿ ಬಾಳಿದ ಸ್ಮಾರಕ ಆಸ್ಪತ್ರೆ ಉಡುಪಿ ಕಮಲ್ ಎ ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ, ಮತ್ತು ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಇದರ ಜಂಟಿ ಆಶ್ರಯದಲ್ಲಿ 35ನೇ ಮದ್ಯವ್ಯಸನ ವಿಮುಕ್ತಿ ಮತ್ತು ವಸತಿ ಶಿಬಿರದ ಸಮರೋಪ ಸಮಾರಂಭವು ಡಾ ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ಕಮಲ್ ಎ ಬಾಳಿಗ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಡಾ. ಎನ್. ಬಿ. ವಿಜಯ್ ಬಲ್ಲಾಳ ಧರ್ಮದರ್ಶಿಗಳು, ಶ್ರೀ ಜನಾರ್ದನ ಮತ್ತು ಶ್ರೀ ಮಹಾಕಾಳಿ ದೇವಸ್ಥಾನ, ಅಂಬಲಪಾಡಿ ಇವರು ಆಗಮಿಸಿದ್ದರು. ಅತಿಥಿಗಳಾಗಿ ಡಾ. ಸನತ್ ರಾವ್ ,ಚರ್ಮರೋಗ ತಜ್ಞರು, ಖಜಾಂಚಿ, ಭಾರತೀಯ ವೈದ್ಯಕೀಯ ಸಂಘ, ಉಡುಪಿ-ಕರಾವಳಿ ಆಗಮಿಸಿ ಶಿಬಿರಾರ್ಥಿಗಳಿಗೆ ಶುಭ ಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಪಿ. ವೆಂಕಟರಾಯ ಭಂಡಾರಿ ಮನೋವೈದ್ಯರು ಮತ್ತು ನಿರ್ದೇಶಕರು, ಡಾ. ಎ. ವಿ. ಬಾಳಿಗಾ ಸಮೂಹ ಸಂಸ್ಥೆಗಳು, ಉಡುಪಿ ಇವರು ವಹಿಸಿದ್ದರು,ವೇದಿಕೆಯಲ್ಲಿ ಡಾ. ವಿರೂಪಾಕ್ಷ ದೇವರಮನೆ,ಮನೋವೈದ್ಯರು ಡಾ ದೀಪಕ್ ಮಲ್ಯ,ಮನೋವೈದ್ಯರು ಉಪಸ್ಥಿತರಿದ್ದರು.ಶ್ರೀಮತಿ ಪೂರ್ಣಿಮಾ, ವೃತ್ತಿಪರ ಚಿಕಿತ್ಸಕರು ಕಾರ್ಯಕ್ರಮಕ್ಕೆ ಪ್ರಾರ್ಥಿಸಿದರು.ಶ್ರೀಮತಿ ಪದ್ಮ ರಾಘವೇಂದ್ರ, ಆಪ್ತ ಸಮಾಲೋಚಕರು ಶಿಬಿರದ ಸಂಪೂರ್ಣ ವರದಿಯನ್ನು ವಾಚಿಸಿದರು.
ಡಾ. ಮಾನಸ್ ಈ ಆರ್ ,ಮನೋವೈದ್ಯರು ಸರ್ವರನ್ನು ಸ್ವಾಗತಿಸಿದರು. ಶ್ರೀಮತಿ ಸೌಜನ್ಯ ಶೆಟ್ಟಿ ಆಡಳಿತ ಅಧಿಕಾರಿಗಳು, ಡಾ ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆ ಇವರು ವಂದಿಸಿದರು, ಶ್ರೀಯುತ ವಿಶ್ವೇಶ್ವರ ಹೆಗಡೆ, ಮನಶಾಸ್ತ್ರಜ್ಞರು ಕಾರ್ಯಕ್ರಮವನ್ನು ನಿರೂಪಿಸಿದರು.

0 ಕಾಮೆಂಟ್‌ಗಳು