ಉಡುಪಿ: ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯದಲ್ಲಿ ನಡೆಯುತ್ತಿರುವ ಗೀತಾ ಚಿಂತನ ಕಾರ್ಯಕ್ರಮ ಅಂಗವಾಗಿ ಜನವರಿ 7ರಂದು ಸಂಜೆ 5 ಗಂಟೆಗೆ ರಾಜಾಂಗಣದಲ್ಲಿ ಖ್ಯಾತ ಶಿಕ್ಷಣ ತಜ್ಞ, ವಾಗ್ಮಿ ಗುರುರಾಜ ಕರ್ಜಗಿ ಅವರಿಂದ ವಿದ್ವತ್ಪೂರ್ಣ ಉಪನ್ಯಾಸ ನಡೆಯಲಿದೆ.
ಅವರು 'ಭಗವದ್ಗೀತೆ ಮತ್ತು ಶಿಕ್ಷಣ' ವಿಷಯ ಕುರಿತು ವಿಶೇಷ ಉಪನ್ಯಾಸ ನೀಡುವರು ಎಂದು ಮಠದ ದಿವಾನ ನಾಗರಾಜ ಆಚಾರ್ಯ ಮತ್ತು ಅಂತಾರಾಷ್ಟ್ರೀಯ ಕಾರ್ಯದರ್ಶಿ ವಿದ್ವಾನ್ ಪ್ರಸನ್ನ ಆಚಾರ್ಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

0 ಕಾಮೆಂಟ್‌ಗಳು