ಮಣಿಪಾಲ: 2ನೇ ಆಯುರ್ವೇದ ವಿಶ್ವ ಶಿಖರ ಸಮಾರಂಭದಲ್ಲಿ ಮುನಿಯಾಲ್ ಆಯುರ್ವೇದ ಅಧ್ಯಾಪಕರಿಗೆ ಮಹತ್ವದ ಗೌರವ

ಮುನಿಯಾಲ್ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಮಣಿಪಾಲದ ಅಧ್ಯಾಪಕರು 2ನೇ ಆಯುರ್ವೇದ ವಿಶ್ವ ¸ಸಮ್ಮೇಳನದಲ್ಲಿ ವಿಶಿಷ್ಟ ಸಾಧನೆ ಮಾಡುವ ಮೂಲಕ ಸಂಸ್ಥೆಗೆ ಅಪಾರ ಗೌರವವನ್ನು ತಂದಿದ್ದಾರೆ. ಆಯುರ್ವೇದ ವೃತ್ತಿಪರರಿಗಾಗಿ ಆಯೋಜಿಸಲಾದ ಥೀಸಿಸ್ ಮತ್ತು ಕೇಸ್ ಪೇಪರ್ ಪ್ರಸ್ತುತಿಕೆ ಸ್ಪರ್ಧೆಗಳಲ್ಲಿ ಭಾರೀ ಸ್ಪಂದನೆ ದೊರೆತಿದ್ದು, 75ಕ್ಕಿಂತ ಹೆಚ್ಚು ಥೀಸಿಸ್ ಪೇಪರ್‌ಗಳು ಹಾಗೂ 173 ಕೇಸ್ ಪೇಪರ್‌ಗಳು ಪ್ರಸ್ತುತಗೊಂಡವು.

ಡಾ. ಸಿಲ್ವಿನಿಯಾ ಅನಿತರಾಜ್ ಫರ್ನಾಂಡಿಸ್,ಸಹಾಯಕ ಪ್ರಾಧ್ಯಾಪಕಿ, ರೋಗ ನಿದಾನ ವಿಭಾಗ,vಥೀಸಿಸ್ ಪೇಪರ್ ಪ್ರಸ್ತುತಿಕೆಯಲ್ಲಿ ಪ್ರಥಮ ಬಹುಮಾನವನ್ನು ಗಳಿಸಿದ್ದಾರೆ.

ಡಾ. ವರುಣಿ ಎಸ್. ಬಾಯರಿ,ಸಹಾಯಕ ಪ್ರಾಧ್ಯಾಪಕಿ, ಅಗದ ತಂತ್ರ ವಿಭಾಗ, ರೋಗಿ ಪ್ರಕರಣ ಪ್ರಸ್ತುತಿಕೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದುಕೊಂಡಿದ್ದಾರೆ.

ಡಾ. ವತ್ಸಲಾ ನಾಯಕ್, ಸಹ ಪ್ರಾಧ್ಯಾಪಕಿ, ಬೈಷಜ್ಯ ಪಲ್ಪನ ವಿಭಾಗ ಥೀಸಿಸ್ ಪ್ರಸ್ತುತಿಕೆಯಲ್ಲಿ ಪ್ರೇರಣಾತ್ಮಕ ಬಹುಮಾನವನ್ನು ಪಡೆದಿದ್ದಾರೆ.

ಈ ಸಾಧನೆಯು ಮುನಿಯಾಲ್ ಆಯುರ್ವೇದದ ಅಧ್ಯಾಪಕರ ಶೈಕ್ಷಣಿಕ ಶ್ರೇಷ್ಠತೆ, ಸಂಶೋಧನಾ ಸಾಮರ್ಥ್ಯ ಮತ್ತು ಆಯುರ್ವೇದ ವಿದ್ಯೆಯ ಪ್ರಚಾರದ ಮೇಲಿನ ನಿಷ್ಠೆಯನ್ನು ಪ್ರತಿಬಿಂಬಿಸುತ್ತದೆ. ಸಂಸ್ಥೆಯ ಆಡಳಿತ ಮಂಡಳಿ, ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳು ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿ, ಪ್ರಶಸ್ತಿ ವಿಜೇತರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು