ಪರ್ಯಾಯೋತ್ಸವದ ಮುನ್ನುಡಿ ಪುರಪ್ರವೇಶ

ಉಡುಪಿಯ ಕೃಷ್ಣಪೂಜಾ ದೀಕ್ಷೆ ಯ ಹಸ್ತಾಂತರಕ್ಕಿರುವ ಹೆಸರು 'ಪರ್ಯಾಯ'.ಆಚಾರ್ಯ ಮಧ್ವರಿಂದ ಪ್ರತಿಷ್ಠಿತನಾದ ಕೃಷ್ಣನಿಗೆ ಅವರ  ಕಾಲದಲ್ಲಿ ಎಂಟು ಶಿಷ್ಯರಿಂದ ಪೂಜಾಧಿಕಾರದ ಜವಾಬ್ದಾರಿ ಎರಡೆ ರಡು ತಿಂಗಳಿಗಿತ್ತು. ಶ್ರೀವಾದಿರಾಜಯತಿಗಳು ಅದನ್ನು ಎರಡುವರ್ಷಕ್ಕೆ ವಿಸ್ತರಿಸಿದರು.ಈ ಅಧಿಕಾರದ ಹಸ್ತಾಂತರವೇ ಧಾರ್ಮಿಕ ಉತ್ಸವವಾಗಿ ಮುಂದಿನ ದಿನಗಳಲ್ಲಿ ಪರ್ಯಾಯೋತ್ಸವ ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆದು ಸಾಗಿಬಂದಿದೆ.


ಕೃಷ್ಣಪೂಜಾದೀಕ್ಷೆಯ ಮೂಲಕ ಪರ್ಯಾಯ ಪೀಠವೇರುವ ಯತಿಗಳು  ಒಂದು ವರ್ಷ ಮುಂಚಿತವಾಗಿ ಯೇ ಆಧ್ಯಾತ್ಮಿಕ ಶಕ್ತಿಯ ಕ್ರೋಢಿಕರಣಕ್ಕಾಗಿ ದೇಶದೆಲ್ಲೆಡೆಯ ಧಾರ್ಮಿಕ ಪುಣ್ಯಕ್ಷೇತ್ರ ದರ್ಶನ ಮಾಡಿ ಉಡುಪಿಗೆ ಆಗಮಿಸುತ್ತಾರೆ.ಭಾವೀ ಪರ್ಯಾಯಪೀಠಾಧೀಶರ ಈ ಆಗಮನವನ್ನೇ  ಪುರಪ್ರವೇಶ ಎಂದು ಕರೆಯಲಾಗುತ್ತದೆ.ಇಲ್ಲಿಂದಲೇ ಪರ್ಯಾಯ ಹಿನ್ನಲೆಯ ವೈಶಿಷ್ಟ್ಯ ಪೂರ್ಣ ಆಚರಣೆಗಳು ಕಳೆ ಕಟ್ಟುತ್ತವ


 ಧಾರ್ಮಿಕ-ಸಾಂಸ್ಕೃತಿಕತೆಯ ಸಹಯೋಗ: ಪುರಪ್ರವೇಶ ಎನ್ನುವುದು ಭಾವೀ ಪರ್ಯಾಯ ಮಠದ ಯತಿಗಳು ಪುಣ್ಯಕ್ಷೇತ್ರ ಸಂಚರಿಸಿ ಆಚಾರ್ಯ ಮಧ್ವರ ಉಡುಪಿಗೆ ಆಗಮಿಸುವ ಪರ್ವಕಾಲ. ಎರಡು ವರ್ಷದ ಕೃಷ್ಣಪೂಜಾದೀಕ್ಷೆಯ ಹಿನ್ನೆಲೆಯಲ್ಲಿ ಕೃಷ್ಣ ಮಠದ ವರ್ತುಲದಲ್ಲೇ ನಿಯಮಾನುಸಾರ ನೆಲೆನಿಲ್ಲಲು ಪ್ರವೇಶಿಸುವ ಸುದಿನ. ಸಂಪ್ರದಾಯದಂತೆ ಮುಹೂರ್ತಲಗ್ನಾದಿಗಳನ್ನು ನಿಶ್ಚೈಸಿ ಪುರ ಪ್ರವೇಶ ದಿನವನ್ನು ನಿಗದಿಗೊಳಿಸಲಾಗುತ್ತದೆ.


ಸಾಮಾನ್ಯವಾಗಿ ಪೀಠವೇರುವ ಯತಿಗಳು ತಮ್ಮ ಮೂಲಮಠದಲ್ಲಿ ಪಟ್ಟದ ದೇವರಿಗೆ ಮಹಾಪೂಜೆ ಸಲ್ಲಿಸಿ ಇಳಿಸಂಜೆಯ ಸಮಯದಲ್ಲಿ ಉಡುಪಿಗೆ ಆಗಮಿಸುತ್ತಾರೆ. ಭಕ್ತಮಹಾ ಜನತೆ ಹಾಗೂ ಶ್ರೀ ಮಠದ ಭಕ್ತರು ಸೇರಿ ಪಟ್ಟದ ದೇವರನ್ನು ಸ್ವರ್ಣಪಲ್ಲಕ್ಕಿಯಲ್ಲಿರಿಸಿ ಯತಿಗಳನ್ನು  ಮೆರವಣಿಗೆ ಮೂಲಕ ಸ್ವಾಗತಿಸುವುದು ಪರಿಪಾಟ.ಯತಿಗಳು ರಥಬೀದಿಯಲ್ಲಿ ಕಾಲ್ನಡಿಗೆಯ ಮೂಲಕ ಚಂದ್ರಮೌಳೇಶ್ವರ ಹಾಗೂ ಅನಂತಾಸನ ದೇವರ ಸಂದರ್ಶನ ಮಾಡಿ ಕೃಷ್ಣ ಮಠವನ್ನು ಪ್ರವೇಶಿಸುತ್ತಾರೆ. ಶ್ರೀ ಕೃಷ್ಣ ಮುಖ್ಯಪ್ರಾಣ  ಮಧ್ವಾಚಾರ್ಯರ ಸಂದರ್ಶನಾದಿಗಳನ್ನು ಮಾಡಿದ ನಂತರ ಪರ್ಯಾಯ ನಿಮಿತ್ತ ವಿಶೇಷವಾಗಿ ಶೃಂಗಾರಗೊಂಡಿರುವ ತಮ್ಮ ಮಠವನ್ನು ಪ್ರವೇಶಿಸುವರು.


 ಪರ್ಯಾಯವೇಳುವ ಮಠದ ಯತಿಗಳು ಹಾಗೂ ಭಾವೀ ಪರ್ಯಾಯಪೀಠಾಧೀಶರಿಗೆ ಜಿಲ್ಲಾಡಳಿತ ಮತ್ತು ನಗರಸಭೆಯ ಅಧಿಕಾರಿವರ್ಗ ನಡೆಸುವ ಪೌರಸಮ್ಮಾನ ರಥಬೀದಿಯ ವೇದಿಕೆಯಲ್ಲಿ ನಡೆಯು ತ್ತದೆ.ಈ ಸಂದರ್ಭದಲ್ಲಿ  ಅಷ್ಟಮಠಗಳು,ಅಭ್ಯಾಗತರು, ಅತಿಥಿಗಣ್ಯರು ಹಾಗೂ ಇತರ ಸಂಘಸಂಸ್ಥೆಗಳು ಉಭಯಮಠಗಳ ಶ್ರೀಗಳನ್ನು ಗೌರವಿಸುವರು.ಅಲ್ಲಿಂದ ಪರ್ಯಾಯೋತ್ಸವದ ದಿನದವರೆಗೆ  ಈ ವೇದಿಕೆ ಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿದಿನ ಸಂಜೆ ನಡೆಯುತ್ತದೆ. ಅದೇ ಸಮಯ ದಲ್ಲಿ ಪರ್ಯಾಯ ಪೀಠಾವರೋಹಣ ಮಠ ಪರ್ಯಾಯದ ಸಮಾರೋಪದ ಸಂಭ್ರಮದ ಕಾರ್ಯಕ್ರಮ ಗಳಿಗೆ ಮುಂದಾಗುತ್ತದೆ.ಇದು ಮಕರಸಂಕ್ರಮಣದ  ಪರ್ವಕಾಲ.ಕೃಷ್ಣಮಠದಲ್ಲಿ ವಾರ್ಷಿಕ ಸಪ್ತೋತ್ಸ ವದ ಸಡಗರ.


ಪುರಪ್ರವೇಶ  ಎನ್ನುವುದು ಪರ್ಯಾಯದ ಪೂರ್ವಪೀಠಿಕೆ. ಸರ್ವಜ್ಞ ಪೀಠಾರೋಹಣ- ಕೃಷ್ಣಪೂಜಾ ದೀಕ್ಷೆ ಯ ಯತಿಗಳು ಪುಣ್ಯಕ್ಷೇತ್ರದರ್ಶನದ ಪುಣ್ಯನದಿಸ್ನಾನದ ಪಾವಿತ್ರ್ಯದೊಂದಿಗೆ ಆಗಮಿಸುವ ಸಾಂಪ್ರ ದಾಯಿಕ ಉತ್ಸವ. 

ಲೇಖನ: ಅಶ್ವತ್ಥ ಭಾರದ್ವಾಜ್, ಕಬ್ಬಿನಾಲೆ ಉಪನ್ಯಾಸಕರು. ಉಡುಪಿ



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು