ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿ, ಬೆಂಗಳೂರು, ಪೂರ್ಣಪ್ರಜ್ಞ ಕಾಲೇಜು(ಸ್ವಾಯತ್ತ), ಉಡುಪಿ, ಪೂರ್ಣಪ್ರಜ್ಞ ಕಾಲೇಜಿನ ಹಳೆವಿದ್ಯಾರ್ಥಿ ಸಂಘ ಇದರ ಸಂಯುಕ್ತ ಅಶ್ರಯದಲ್ಲಿ ದಿನಾಂಕ. ೫.೦೧.೨೦೨೬ರಂದು ಉಪನ್ಯಾಸಕ, ರಂಗನಟ, ಸಾಹಿತಿ, ರಂಗನಿರ್ದೇಶಕ, ಬಹುಶ್ರುತ ವಿದ್ವಾಂಸರಾಗಿದ್ದ ಪ್ರೊ. ರಾಮದಾಸರಿಗೆ ನುಡಿನಮನ ಸಲ್ಲಿಸಲಾಯಿತು.
ಪ್ರೊ. ರಾಮದಾಸರ ಶೈಕ್ಷಣಿಕ, ಸಾಹಿತ್ಯಿಕ, ಕಲಾ ಸಾಧನೆ ಗುರುತರವಾದುದು. ಪೂರ್ಣಪ್ರಜ್ಞ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ರಾಮದಾಸರಂತಹ ಆದರ್ಶ ಶಿಕ್ಷಕರು ನಮ್ಮ ಶಿಕ್ಷಣ ಸಂಸ್ಥೆಯಲ್ಲಿಯೂ ರೂಪುಗೊಳ್ಳುವಂತಾಗಲಿ ಎಂದು ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿಯ ಅಧ್ಯಕ್ಷರಾಗಿರುವ ಪರಮಪೂಜ್ಯ ಶ್ರೀಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಆಶೀರ್ವದಿಸಿದರು.
ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮಡಳಿ, ಬೆಂಗಳೂರು ಇದರ ಗೌರವ ಕರ‍್ಯದರ್ಶಿ ಡಾ. ಎ.ಪಿ. ಭಟ್ ಇವರು ರಾಮದಾಸರ ಖಗೋಳಶಾಸ್ತç ಹಾಗೂ ಪಾಕಶಾಸ್ತçದ ಆಸಕ್ತಿಯ ಕುರಿತು ತಿಳಿಸಿದರು. ಪೂರ್ಣಪ್ರಜ್ಞ ಸಂಧ್ಯಾಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಮಾಧವಿ ಭಂಡಾರಿಯವರು ರಾಮದಾಸರ ನಾಟಕ, ಸಾಂಸ್ಕೃತಿಕ ಕ್ಷೇತ್ರಗಳ ಕೊಡುಗೆಯ ಕುರಿತು ಮಾತನಾಡಿದರು. ಪಿಪಿಸಿ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥರಾಗಿರುವ ಡಾ. ಶ್ರೀಕಾಂತ ಸಿದ್ದಾಪುರ ಇವರು ರಾಮದಾಸರ ತಲಸ್ಪರ್ಶಿ ಅಧ್ಯಯನ, ಭಾಷಾಪ್ರೌಢಿಮೆಯ ಬಗೆಗೆ ವಿವರಿಸಿದರು. ಪೂರ್ಣಪ್ರಜ್ಞ ಇನ್ಸಿ÷್ಟಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಇದರ ಆಡಳಿತ ನಿರ್ದೇಶಕರಾಗಿರುವ ಪ್ರೊ. ಶ್ರೀರಮಣ ಐತಾಳ್, ಪ್ರೊ. ನಟರಾಜ್ ದೀಕ್ಷಿತ್, ಪ್ರೊ. ಶ್ರೀಧರ ಭಟ್, ಡಾ. ಆರ್.ಎಲ್ ಭಟ್, ಪ್ರೊ. ಸದಾಶಿವ ರಾವ್, ಡಾ. ಬಿ. ಜಗದೀಶ್ ಶೆಟ್ಟಿ, ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮು ಎಲ್, ಉಡುಪಿ ಕಲಾರಂಗದ ಕರ‍್ಯದರ್ಶಿ ಶ್ರೀ ಮುರಳಿ ಕಡೆಕಾರ್, ರಾಮದಾಸರ ಸುಪುತ್ರಿ ಶ್ರೀಮತಿ ಜ್ಯೋತಿಷ್ಮತಿ ಮೊದಲಾದವರು ನುಡಿನಮನ ಸಲ್ಲಿಸಿದರು.
ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ಕರ‍್ಯದರ್ಶಿ ಶ್ರೀ ತೇಜಸ್ವಿ ಶಂಕರ್ ಸ್ವಾಗತಿಸಿದರು. ರಸಾಯನಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಸುಪರ್ಣಾ ನಿರೂಪಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕರಬ ವಂದಿಸಿದರು.

0 ಕಾಮೆಂಟ್‌ಗಳು