ಇಂದಿರಾ ಶಿವರಾವ್ ಟ್ರಸ್ಟ್ ಮತ್ತು ಉಡುಪಿ ಜಿಲ್ಲಾ ಯುವಬ್ರಾಹ್ಮಣ ಪರಿಷತ್ ವತಿಯಿಂದ ಶಿಷ್ಯವೇತನ ವಿತರಣಾ ಸಮಾರಂಭ

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಸಹಕಾರದೊಂದಿಗೆ ಇಂದಿರಾ ಶಿವರಾವ್ ಟ್ರಸ್ಟ್ ರಿ. ಇವರ ವತಿಯಿಂದ ಕೊಡಲ್ಪಡುವ ಶಿಷ್ಯ ವೇತನ ವಿತರಣಾ ಸಮಾರಂಭವು ಗುಂಡಿ ಬೈಲಿನ  ಬ್ರಾಹ್ಮಿ ಸಭಾಭವನದಲ್ಲಿ ನಡೆಯಿತು.

ಶ್ರೀ ಕೃಷ್ಣಾಪುರ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡುತ್ತಾ ಸಮಾಜದಲ್ಲಿರುವ ಶ್ರೀಮಂತರು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಸಹಾಯಧನ ನೀಡುವ ಮೂಲಕ ಸದೃಢ ದೇಶ ಕಟ್ಟಲು ನೆರವಾಗಬೇಕು.‌ಇಂದಿರಾ ಶಿವರಾವ್ ಟ್ರಸ್ಟ್ ಹಲವಾರು ವರ್ಷಗಳಿಂದ ಇಂತಹ ಸಮಾಜಸೇವೆ ಕಾರ್ಯ ಮಾಡಿಕೊಂಡು ಬಂದು ಇತರರಿಗೆ ಮಾದರಿಯಾಗಿದೆ. ಇಂದು ಟ್ರಸ್ಟ್ ಮುಖಾಂತರ ಸಹಾಯಧನ ಸ್ವೀಕರಿಸಿದ ವಿದ್ಯಾರ್ಥಿಗಳು ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಕಠಿಣ ಪರಿಶ್ರಮದಿಂದ ಕಲಿತು, ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಉತ್ತಮ ಉದ್ಯೋಗವನ್ನು ಹೊಂದಿ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.ಉಡುಪಿ ಆಸುಪಾಸಿನ 52 ಶಾಲೆಗಳ ಸುಮಾರು 65 ವಿದ್ಯಾರ್ಥಿಗಳಿಗೆ ರೂ 1.25 ಲಕ್ಷ ಸಹಾಯಧನ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿ.ಯು.ಸಿ. ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಪರಿಷತ್ತಿನ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು. ಸಾಧಕರಾದ ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿ ಶ್ರೀಮತಿ ಮಹಾಲಕ್ಷ್ಮಿ ಭಟ್ ಪಾಡಿಗಾರ್ ಇವರನ್ನು ಸನ್ಮಾನಿಸಲಾಯಿತು. ಅಶಕ್ತರಿಗೆ ವೈದ್ಯಕೀಯ ಸಹಾಯಧನ ವಿತರಿಸಲಾಯಿತು. ಇಂದಿರಾ ಶಿವರಾವ್ ಟ್ರಸ್ಟಿನ ಕಾರ್ಯದರ್ಶಿ ಯು. ರಮೇಶ್ ರಾವ್, ಟ್ರಸ್ಟಿನ ವಿಶ್ವಸ್ಥರಾದ ನಾಗರಾಜ ತಂತ್ರಿ ಮತ್ತು ಚಂದ್ರಕಾಂತ ಕೆ.ಎನ್., ನಿವೃತ್ತ ಯೋಧ ರಘುಪತಿ ರಾವ್, ಪರಿಷತ್ತಿನ ಕೋಶಾಧಿಕಾರಿ ರವೀಂದ್ರ ಆಚಾರ್ಯ, ಪೂರ್ವಾಧ್ಯಕ್ಷರಾದ ಚೈತನ್ಯ ಎಂ.ಜಿ., ಭಾಸ್ಕರ ರಾವ್ ಕಿದಿಯೂರು ಉಪಸ್ಥಿತರಿದ್ದರು. ಯುವ ಬ್ರಾಹ್ಮಣ ಪರಿಷತ್ತಿನ ಅಧ್ಯಕ್ಷರಾದ ರಘುಪತಿ ರಾವ್ ಸ್ವಾಗತಿಸಿದರು. ಟ್ರಸ್ಟಿ ನಾಗರಾಜ ತಂತ್ರಿ ಪ್ರಸ್ತಾವನೆಗೈದು ಇಂದಿರಾ ಶಿವರಾವ್ ಟ್ರಸ್ಟಿನ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಸವಿತಾ ಶಶಿಧರ್ ಭಟ್, ವಿಜಯಾ ರವಿಪ್ರಕಾಶ್, ಸುನಿತಾ ಚೈತನ್ಯ, ಸುಮನ ಆಚಾರ್ಯ, ವಸುಧಾ ಕೃಷ್ಣರಾಜ್ ಸಹಕರಿಸಿದರು.

ವಿಷ್ಣುಪ್ರಸಾದ್ ಪಾಡಿಗಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಪರಿಷತ್ತಿನ ಕಾರ್ಯದರ್ಶಿ ಅಮಿತಾ ಕ್ರಮಧಾರಿ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು