ವರ್ಷದ ಒಂದೇ ಗ್ರಹಣ ಚಂದ್ರಗ್ರಹಣ ಮಾರ್ಚ್ 3 ಹುಣ್ಣಿಮೆಯಂದು. ಭಾರತೀಯರಿಗೆ ಇದು ಗ್ರಹಣವೆಂದು ಅನಿಸದು. ಕಾರಣ ಗ್ರಹಣ ಸಂಪೂರ್ಣ ಮುಗಿಯುವ ಹಂತದಲ್ಲಿ ಚಂದ್ರೋದಯವಾಗುವುದರಿಂದ ನಮಗೆ ಗ್ರಹಣದ ಚಂದ್ರ ಕಾಣುವುದೇ ಬರೇ 9 ನಿಮಿಷ. ಅದೂ ಪಾರ್ಶ್ವ ಚಂದ್ರ ಗ್ರಹಣ. ಅದೂ ಬರೇ ಚಂದ್ರ 8ಅಂಶ ಭಾಗ ಮಾತ್ರ ಗ್ರಹಣ ಆವರಿಸಿರುವುದು. ಉಡುಪಿಗೆ ಸೂರ್ಯಾಸ್ತ 6:38ಕ್ಕೆ. ಚಂದ್ರೋದಯವೂ 6:38 ಕ್ಕೆ. ಆಕಡೆ ಪಶ್ಚಿಮದಲ್ಲಿ ಸೂರ್ಯಾಸ್ತ. ಈ ಕಡೆ ಪೂರ್ವದಲ್ಲಿ ಪಾರ್ಶ್ವ ಗ್ರಹಣದ ಚಂದ್ರೋದಯ. ಇದು ಗ್ರಹಣದ ಚಂದಿರ ಹೌದೋ ಅಲ್ಲವೋ ಎಂದು ಯೋಚಿಸುವಷ್ಟರಲ್ಲಿ ಗ್ರಹಣ ಮುಗಿದಿರುತ್ತದೆ.
6:47 ಕ್ಕೆ ಗ್ರಹಣ ಮುಗಿಯುವದರಿಂದ ಗ್ರಹಣದ ಚಂದಿರ ಕಾಣ ಸಿಗುವುದು ಕಷ್ಟ. ಸೂರ್ಯ ಗ್ರಹಣದಲ್ಲಾದರೆ ಗ್ರಹಣದ ಬಿಂಬ ಪ್ರಾರಂಭ ಅಂತ್ಯ ಪ್ರತಿಬಿಂಬ ನೋಡಿ ಕರಾರುವಕ್ಕಾಗಿ ತಿಳಿಯಬಹುದು. ಆದರೆ ಚಂದ್ರ ಗ್ರಹಣ ದಲ್ಲಿ ಕಪ್ಪು ಆವರಿಸಿರುವುದು ಕರಾರುವಕ್ಕಾಗಿ ಕಾಣುವುದಿಲ್ಲ. ಸುಮಾರು 25 ಅಂಶ ಆವರಿಸಿದಾಗ ಅನುಭವಕ್ಕೆ ಬರುತ್ತದೆ . ಈ ದಿನ ಗ್ರಹಣದ ಕಡೇಯ ಉಳಿದ ಭಾಗ ಬರೇ 8 ಅಂಶ. ಬರೇ 9ತ್ತೇ ನಿಮಿಷ. ಹಾಗಾಗಿ ಗ್ರಹಣ ಹೌದಾದರೂ ನೋಡಲು ಕಷ್ಟ.
~ಡಾ ಎ ಪಿ ಭಟ್ , ಉಡುಪಿ.

0 ಕಾಮೆಂಟ್ಗಳು