ಉಡುಪಿ ಜಿಲ್ಲಾ ಮರಾಠಿ ಮಹಿಳಾ ವೇದಿಕೆ, ಕುಂಜಿಬೆಟ್ಟು ಇವರಿಂದ ಹಮ್ಮಿಕೊಂಡ ಮಹಿಳಾ ದಿನಾಚರಣೆ ದಿನಾಂಕ 15/03/2026 ರಂದು ಸಂಭ್ರಮದಿಂದ ನೆರವೇರಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಾ| ವಿಜಯಾ ಉದಯ ನಾಯ್ಕ್ ರವರು ಸಭೆಯನ್ನುದ್ದೇಶಿಸಿ ಮಾತನಾಡಿ, ಮಹಿಳೆಯರ ಸಬಲೀಕರಣ ಪ್ರತಿಯೊಬ್ಬರ ಮನೆಯಿಂದನೇ ಆರಂಭವಾಗಬೇಕು. ಮಹಿಳೆಯರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಿ ಕಾಪಾಡಬೇಕು,ಹಾಗೂ ಆತ್ಮ ವಿಶ್ವಾಸವನ್ನು ಬೆಳೆಸಬೇಕು ಎಂದರು.
ಉ.ಜಿ.ಮರಾಠಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಭಾರತಿ ಲೋಕನಾಥ್ ರವರು ಮಾತನಾಡಿ, ಮಹಿಳೆ ಮನೆಯ ಸಂಸಾರದ ಕಣ್ಣು ಇದ್ದಂತೆ, ಸಂಸ್ಕಾರಯುತ ಮಹಿಳೆಯಿಂದ ಸಂಸಾರ ಸುಖ ಮಯವಾಗುವುದು. ನಾವು ಬೆಳೆಯೋಣ, ಇನ್ನೊಬ್ಬರನ್ನು ಬೆಳೆಸೋಣ ಎನ್ನುವ ಮೂಲ ಧ್ಯೇಯವನ್ನಿಟ್ಟು, ಎಲ್ಲರೂ ಒಗ್ಗಟ್ಟಿನಿಂದ,ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ ಎಲ್ಲರನ್ನೂ ಸಮಾನತೆಯಿಂದ ಕಾಣಬೇಕೆಂದು ನುಡಿಮಾತನ್ನಾಡಿದರು.
ಉ.ಜಿ.ಮ.ಸ.ಸೇವಾ ಸಂಘದ ಅಧ್ಯಕ್ಷರಾದ ಶ್ರೀ ಕೆ.ಟಿ.ನಾಯ್ಕ್ ರವರು ಮಾತನಾಡಿ, ಮಹಿಳೆಯರ ಸಬಲೀಕರಣ ಪ್ರತಿಯೊಂದು ಕ್ಷೇತ್ರದಲ್ಲಿ ಆಗಬೇಕು ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ವೇದಿಕೆಯ ಪದಾಧಿಕಾರಿಗಳಾದ ಶ್ರೀಮತಿ ಭಾರತಿ ಕೃಷ್ಣ ನಾಯ್ಕ್, ಶ್ರೀಮತಿ ಲಕ್ಷ್ಮಿ ನಾಯ್ಕ್, ಶ್ರೀಮತಿ ವಿದ್ಯಾ ನಾಯ್ಕ್, ಶ್ರೀಮತಿ ಜ್ಯೋತಿ ನಾಯ್ಕ್,ಉ.ಜಿ.ಮ.ಸೇವಾ ಸಂಘದ ಪದಾಧಿಕಾರಿಗಳಾದ ಶ್ರೀಮತಿ ಜಾನಕಿ ನಾಯ್ಕ್, ಶ್ರೀ ಭುಜಂಗ ನಾಯ್ಕ್ ಉಪಸ್ಥಿತರಿದ್ದರು.
ಶ್ರೀಮತಿ ಮಾಲತಿ ರಮೇಶ್ ಕಾರ್ಯಕ್ರಮ ನೆರವೇರಿಸಿದರು, ಶ್ರೀಮತಿ ಸುಜಾತಾ ನಾಯ್ಕ್ ಧನ್ಯವಾದ ಸಮರ್ಪಿಸಿದರು.

0 ಕಾಮೆಂಟ್‌ಗಳು