ಉಡುಪಿ : ಸಾಂಸ್ಕೃತಿಕ ವೇದಿಕೆ ರಥಬೀದಿ ಗೆಳೆಯರು (ರಿ.), ಉಡುಪಿ ಇದರ ವತಿಯಿಂದ ಡಾ. ನಿ. ಮುರಾರಿ ಬಲ್ಲಾಳ್ ಮತ್ತು ಪ್ರೊ. ಕೆ.ಎಸ್. ಕೆದ್ಲಾಯ ನೆನಪಿನ ‘ಮುರಾರಿ-ಕೆದ್ಲಾಯ ರಂಗೋತ್ಸವ’ವನ್ನು ದಿನಾಂಕ 13 ಮಾರ್ಚ್ 2026ರಿಂದ 15 ಮಾರ್ಚ್ 2026ರವರೆಗೆ ಪ್ರತಿದಿನ ಗಂಟೆ 6-30ಕ್ಕೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಡಾ. ಎನ್. ಮುರಾರಿ ಬಲ್ಲಾಳ್ ಚಿಂತನ ಫೌಂಡೇಶನ್ (ರಿ.) ಅಂಬಲಪಾಡಿ ಇವರ ಸಹಕಾರದೊಂದಿಗೆ ನಡೆಯಲಿದೆ.
ದಿನಾಂಕ 13 ಮಾರ್ಚ್ 2026ರಂದು ಸಂಜೆ ಗಂಟೆ 5-45ಕ್ಕೆ ಮೈಸೂರು ರಂಗಾಯಣ ನಿರ್ದೇಶಕರಾದ ಸತೀಶ್ ತಿಪಟೂರು ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಉಡುಪಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಮತ್ತು ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವನಿತಾ ಮಯ್ಯ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು.
ದಿನಾಂಕ 13 ಮಾರ್ಚ್ 2026ರಂದು ಚಿದಂಬರ ರಾವ್ ಜಂಬೆ ಇವರ ನಿರ್ದೇಶನದಲ್ಲಿ ಮೈಸೂರು ರಂಗಾಯಣ ತಂಡದವರು ಅಭಿನಯಿಸುವ ನಾಟಕ ‘ಅಂಬೇಡ್ಕರ್ ಕೊಲಾಜ್’, ದಿನಾಂಕ 14 ಮಾರ್ಚ್ 2026ರಂದು ಡಾ. ಸಾಸ್ವೇಹಳ್ಳಿ ಸತೀಶ್ ಇವರ ನಿರ್ದೇಶನದಲ್ಲಿ ಶಿವಮೊಗ್ಗದ ಸಮುದಾಯ ತಂಡದವರು ಅಭಿನಯಿಸುವ ನಾಟಕ ‘ನೀರೊಳಗಣ ಕಿಚ್ಚು’ ಮತ್ತು ದಿನಾಂಕ 15 ಮಾರ್ಚ್ 2026ರಂದು ಡಾ. ಸ್ಯಾಮ್ ಕುಟ್ಟಿ ಪಟ್ಟಂಕರಿ ಇವರ ನಿರ್ದೇಶನದಲ್ಲಿ ಬೆಂಗಳೂರಿನ ಸಮುದಾಯ ತಂಡದವರು ‘ಭಗವಂತನ ಮರಣ’ ಎಂಬ ನಾಟಕ ಪ್ರದರ್ಶನ ನೀಡಲಿರುವರು.

0 ಕಾಮೆಂಟ್‌ಗಳು