ಸಿದ್ದಾಪುರ : ಅಕ್ರಮವಾಗಿ ಅಂದರ್‌-ಬಾಹರ್‌ ಆಡುತ್ತಿದ್ದ ನಾಲ್ವರ ಬಂಧನ!

ದಿನಾಂಕ 23.03.2026 ರಂದು ಸಂಜೆ 05:30 ಗಂಟೆಗೆ ಸಿದ್ದಾಪುರ ಗ್ರಾಮದ ಮೇಜ್ಜೆಡ್ಡು ಎಂಬಲ್ಲಿನ ಸುಧಾಕರ ಶೆಟ್ಟಿ ಎಂಬವರ ಮನೆಯಲ್ಲಿ ಅಕ್ರಮವಾಗಿ ಅಂದರ್‌-ಬಾಹರ್‌ ಇಸ್ಟೀಟ್‌ ಜುಗಾರಿ ಆಟ ಆಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಫಿರ್ಯಾದಿ ಸಂತೋಷ್‌. ಎ ಕಾಯ್ಕಿಣಿ ಸಿ.ಪಿ.ಐ ಕುಂದಾಪುರ ಗ್ರಾಮಾಂತರ ವೃತ್ತ ಇವರು ಕೂಡಲೇ ಶಂಕರನಾರಾಯಣ ಪೊಲೀಸ್‌ ಠಾಣಾ ಪಿ.ಎಸ್.ಐ ಅಕ್ಷಯ ಕುಮಾರಿ ಎಸ್‌.ಎನ್‌ ಹಾಗೂ ಸಿಬ್ಬಂದಿಗಳಾದ ಹೆಚ್‌.ಸಿ ಮಂಜುನಾಥ.ಕೆ, ಹೆಚ್‌.ಸಿ ರಾಘವೇಂದ್ರ.ಕೆ, ಹೆಚ್‌.ಸಿ ವಿಕ್ರಮ್‌, ಪಿ.ಸಿ ಹರೀಶ್‌.ಜಿ, ಪಿ.ಸಿ ಜಯರಾಮ, ಪಿ.ಸಿ ಪರಶುರಾಮರವರೊಂದಿಗೆ ಸ್ಥಳಕ್ಕೆ ತೆರಳಿ ಎಲ್ಲರೂ ಜೊತೆಯಲ್ಲಿ ಸೇರಿಕೊಂಡು ಮರೆಯಲ್ಲಿ ನಿಂತು ನೋಡಿದಾಗ ಸುಧಾಕರ ಶೆಟ್ಟಿ ರವರ ಆರ್.ಸಿ.ಸಿ ಛಾವಣೆಯ ಮನೆಯ ಹೊರಗಿನ ಆವರಣದಲ್ಲಿ 06 ಜನ ಗಂಡಸರು ವೃತ್ತಾಕಾರದಲ್ಲಿ ಕುಳಿತುಕೊಂಡಿದ್ದು ಇಸ್ಪೀಟ್‌ ಎಲೆಗಳನ್ನು ಹಾಕುತ್ತಾ ಹಣವನ್ನು ಪಣವಾಗಿಟ್ಟು ಎಲೆಗಳನ್ನು ಹಾಕುತ್ತಾ ಇಸ್ಟೀಟ್‌ ಜುಗಾರಿ ಆಟ ಆಡುತ್ತಿರುವುದು ಕಂಡು ಬಂತು. ಅವರುಗಳು ಇಸ್ಪೀಟ್‌ ಜೂಗಾರಿ ಆಟದಲ್ಲಿ ಹಣವನ್ನು ಪಣವಾಗಿಟ್ಟು ಜೂಜಾಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು 20:20 ಗಂಟೆಗೆ ಪಂಚರ ಸಮಕ್ಷಮ ಸುತ್ತುವರಿದು ದಾಳಿ ನಡೆಸಿದಾಗ ಆಟ ಆಡುತ್ತಿದ್ದ 6 ಜನರ ಪೈಕಿ ಇಬ್ಬರು ಮನೆಯ ಕಂಪೌಂಡ್‌ ಆವರಣವನ್ನು ಹಾರಿಕೊಂಡು ಓಡಿ ತಪ್ಪಿಸಿಕೊಂಡಿದ್ದು ಉಳಿದ 04 ಜನರನ್ನು ಸಿಬ್ಬಂದಿಗಳ ಸಹಾಯದಿಂದ ಹಿಡಿದುಕೊಂಡು ಅವರ ಹೆಸರು & ವಿಳಾಸವನ್ನು ವಿಚಾರಿಸಲಾಗಿ, 1) ಸುಧಾಕರ ಶೆಟ್ಟಿ (52) ತಂದೆ: ದಿ.ನರಸಿಂಹ ಶೆಟ್ಟಿ, ವಾಸ: ಮನೆ ನಂಬ್ರ 24/1, 10 ನೇ ಮೈನ್‌ ರೋಡ್‌, ಶ್ರೀನಗರ, ಬೆಂಗಳೂರು ಹಾಲಿ ವಾಸ: ಮೇಲ್ಜೆಡ್ಡು, ಸಿದ್ದಾಪುರ ಗ್ರಾಮ, ಕುಂದಾಪುರ ತಾಲೂಕು, 2) ರಮೇಶ್‌ ಪ್ರಾಯ: 46 ವರ್ಷ, ತಂದೆ: ದಿ.ನಾರಾಯಣ ಪೂಜಾರಿ, ವಾಸ: ವರಾಹಿ ರಸ್ತೆ, ಸಿದ್ದಾಪುರ ಗ್ರಾಮ, ಕುಂದಾಪುರ ತಾಲೂಕು, 3)ಮನೋಹರ ಪ್ರಾಯ: 46 ವರ್ಷ: ತಂದೆ: ದಿ.ಲಕ್ಷ್ಮಣ ವಾಸ: ಜನ್ಸಾಲೆ, ಸಿದ್ದಾಪುರ ಗ್ರಾಮ, ಕುಂದಾಪುರ ತಾಲೂಕು, 4) ಮಹೇಶ್‌ (43) ತಂದೆ: ನಾರಾಯಣ ಪೂಜಾರಿ, ವಾಸ: ಚಿನ್ಮಯಿ ಆಸ್ಪತ್ರೆ ಹತ್ತಿರ, ಕುಂದಾಪುರ ಎಂಬುವುದಾಗಿ ತಿಳಿಸಿದ್ದು, ಅವರುಗಳು ತಾವು ಅಂದರ್‌-ಬಾಹರ್‌ ಇಸ್ಪೀಟ್‌ ಜುಗಾರಿ ಆಟದಲ್ಲಿ ಹಣವನ್ನು ಪಣವಾಗಿಟ್ಟು ಜೂಜಾಟ ಆಡುತ್ತಿದ್ದುದಾಗಿ ಒಪ್ಪಿಕೊಂಡಿದ್ದು, ನಂತರ ಓಡಿ ಹೋದ ವ್ಯಕ್ತಿಗಳ ಬಗ್ಗೆ ವಿಚಾರಿಸಿದಾಗ ಒಬ್ಬಾತನು ಹರ್ಷ, ಮತ್ತೊಬ್ಬನು ಕೃಷ್ಣ ಪೂಜಾರಿ ಎಂಬುದಾಗಿ ತಿಳಿಸಿದ್ದು. ನಂತರ ಸೆರೆ ಹಿಡಿದ ಆಪಾದಿತರು ಧರಿಸಿದ ಬಟ್ಟೆಯನ್ನು ಚೆಕ್‌ ಮಾಡಲಾಗಿ ಸುಧಾಕರ ಶೆಟ್ಟಿಯ ಬಳಿಯಲ್ಲಿ ಒಟ್ಟು 2300/- ರೂಪಾಯಿ, ಮನೋಹರನ ಬಳಿಯಲ್ಲಿ ಒಟ್ಟು 1400/- ರೂಪಾಯಿ, ಮಹೇಶನ ಬಳಿಯಲ್ಲಿ ಒಟ್ಟು 2100/- ರೂಪಾಯಿ ರೂಪಾಯಿ ಸಿಕ್ಕಿದ್ದು ಸದ್ರಿ ಹಣದ ಬಗ್ಗೆ ಅವರಲ್ಲಿ ಕೇಳಿದ್ದಕ್ಕೆ ಈ ಹಣವನ್ನು ನಾವು ಅಂದರ್‌ - ಬಾಹರ್‌ ಇಸ್ಪೀಟ್‌ ಆಟ ಆಡಲು ತಂದಿರುವುದಾಗಿ ತಿಳಿಸಿದ್ದು. ನಂತರ ತಕ್ಷೀರು ಸ್ಥಳದಲ್ಲಿ ಕುಳಿತು ಜುಗಾರಿ ಆಟ ಆಡಲು ನೆಲದ ಮೇಲೆ ಕೆಂಪು ಮತ್ತು ಕಪ್ಪು ಬಣ್ಣದಲ್ಲಿರುವ ಬೆಡ್‌ಶೀಟ್‌ನ್ನು ಹಾಸಿದ್ದು, ಸದ್ರಿ ಬೆಡ್‌ಶೀಟ್‌ನ ಮೇಲೆ ಬಿದ್ದಿದ್ದ ಹಣವನ್ನು ಎಣಿಕೆ ಮಾಡಲಾಗಿ ಒಟ್ಟು 400/- ರೂಪಾಯಿ ಹಾಗೂ ಇಸ್ಪೀಟ್‌ ಎಲೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿದ್ದು, ಸದ್ರಿ ಎಲೆಗಳನ್ನು ಒಟ್ಟು ಮಾಡಿ ಎಣಿಸಲಾಗಿ 52 ಇಸ್ಪೀಟ್‌ ಎಲೆಗಳು ಇರುತ್ತದೆ. ನಂತರ 1) ಅಂದರ್‌ ಬಾಹರ್‌ ಇಸ್ಪೀಟ್‌ ಆಟ ಆಡುತ್ತಿದ್ದವರ ಬಳಿಯಿದ್ದ ಹಾಗೂ ನೆಲಕ್ಕೆ ಹಾಸಿದ್ದ ಬೆಡ್‌ಶೀಟ್‌ ಮೇಲೆ ಇದ್ದ ಒಟ್ಟು 6,700/- ರೂಪಾಯಿ, 2) ಕೆಂಪು ಮತ್ತು ಕಪ್ಪು ಬಣ್ಣದ ಬೆಡ್‌ಶೀಟ್‌-1, 3) 52 ಇಸ್ಪೀಟ್ ಎಲೆಗಳನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡಿರುವುದಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು