ಬೆಂಗಳೂರಿನ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಐಐಎಂಬಿ ಕ್ಯಾಂಪಸ್‌ನಲ್ಲಿ ನಡೆದ ಘಟಿಕೋತ್ಸವದಲ್ಲಿ ಮಾರ್ಪಳ್ಳಿಯ ಸೋನಲ್ ನಾಯಕ್ ಅವರಿಗೆ ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ.
ಪರಿಸರ ಸ್ನೇಹಿ, ಹಸಿರು ವ್ಯವಹಾರಗಳಲ್ಲಿ ಅನುಸರಿಸುವ ಉದ್ಯಮಶೀಲತಾ ಪ್ರಕ್ರಿಯೆಗಳನ್ನು ಅವರ ಪ್ರಬಂಧವು ಪರಿಶೀಲಿಸುತ್ತದೆ. ಬೋಸ್ಟನ್, ಚಿಕಾಗೋ ಮತ್ತು ಫ್ರಾಂಕ್‌ಫರ್ಟ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಅವರು ತಮ್ಮ ಸಂಶೋಧನೆಯನ್ನು ಮಂಡಿಸಿದ್ದಾರೆ.
ಸೋನಲ್ ನಾಯಕ್ ಅವರು ಡಾ.ರವೀಂದ್ರನಾಥ್ ನಾಯಕ್ ಮತ್ತು ಜ್ಯೋತಿ ನಾಯಕ್ ಅವರ ಪುತ್ರಿ.

0 ಕಾಮೆಂಟ್‌ಗಳು